Saturday, August 8, 2026
Homeಕರಾವಳಿಮಂಗಳೂರುಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಹರೀಶ್ ಪೂಂಜಾಗೆ ಬಿಜೆಪಿ ಯುವಮೋರ್ಚಾ ವತಿಯಿಂದ ಸನ್ಮಾನ

ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಹರೀಶ್ ಪೂಂಜಾಗೆ ಬಿಜೆಪಿ ಯುವಮೋರ್ಚಾ ವತಿಯಿಂದ ಸನ್ಮಾನ

- Advertisement -
- Advertisement -

ಬೆಳ್ತಂಗಡಿ : ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್‌ಎ” ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಆ.8 ರಂದು ಗೌರವಿಸಿ ಸನ್ಮಾನಿಸಲಾಯಿತು.

ರಾಜ್ಯದ ಪ್ರತಿಷ್ಠಿತ ವಾರ್ತಾವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿ ವತಿಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಶಾಸಕರು ಕೈಗೊಂಡ ಜನಸ್ನೇಹಿ ಕಾರ್ಯಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.ಶಾಸಕ ಹರೀಶ್ ಪೂಂಜಾ ಅವರ ಸ್ವಗೃಹ ಮಿಥಿಲಾದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಹಾಗೂ ಯುವಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, “ಬೆಸ್ಟ್ ಎಂಎಲ್‌ಎ” ಪ್ರಶಸ್ತಿ ಶಾಸಕ ಹರೀಶ್ ಪೂಂಜಾ ಅವರಿಗೆ ಮಾತ್ರವಲ್ಲದೆ, ಇಡೀ ಬೆಳ್ತಂಗಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕನಿಗೂ ದೊರೆತ ಗೌರವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಜಿಲ್ಲಾ ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್ ಮರೋಡಿ, ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನೀತ್ ಕೋಟ್ಯಾನ್ ಸಾವ್ಯ, ಜಯಪ್ರಸಾದ್ ಗೌಡ ಕಡಮ್ಮಾಜೆ ಫಾರ್ಮ್ಸ್ ಮೊಗ್ರು, ಉಪಾಧ್ಯಕ್ಷರಾದ ಗಣೇಶ್ ಆರ್. ಲಾಯಿಲ, ಹರೀಶ್ ಗೌಡ ಸಂಭೋಲ್ಯ, ಪ್ರಕಾಶ್ ಪೂಜಾರಿ ಬಾರ್ಯ, ಸುಜಿತ್ ಪೆರಾಡಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಡಲ ಯುವಮೋರ್ಚಾ ಕಾರ್ಯದರ್ಶಿಗಳಾದ ಗಿರೀಶ್ ಗೌಡ ಬಿ.ಕೆ. ಬಂದಾರು, ಸುಧೀರ್ ಪೂಜಾರಿ ಚಾರ್ಮಾಡಿ, ರಂಜು ಕೊಕ್ಕಡ, ಜಗದೀಶ್ ಕನ್ನಾಜೆ, ಕೋಶಾಧಿಕಾರಿ ಸ್ವಸ್ತಿಕ್ ಗೌಡ ಹಟತ್ತೋಡಿ-ಕುಕ್ಕಳ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇಂಕ್ಯಾರ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಶ್ವಿನ್ ಅಂಡಿಂಜೆ, ಪ್ರಸಾದ್ ಸುಧೇಮುಗೇರು, ಮನೀಷ್ ಡಿ.ಎ. ಧರ್ಮಸ್ಥಳ, ಜಯಕುಮಾರ್ ಶಿರ್ಲಾಲು, ಪವನ್ ಬಂಗೇರ ನಗರ, ಪ್ರದೀಪ್ ಕುಲಾಲ್ ಕಾಯರ್ತಡ್ಕ, ಸಂತೋಷ್ ಕುಮಾರ್ ಇಂದಬೆಟ್ಟು, ಪವನ್ ಶೆಟ್ಟಿ ಉಜಿರೆ ಹಾಗೂ ಮಹಾಶಕ್ತಿ ಪ್ರಮುಖರಾದ ಲೋಕ್ಷತ್, ಹರೀಶ್ ಕಾಶಿಪಟ್ಣ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -

Latest News

error: Content is protected !!