Saturday, August 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಗುತ್ತಿಲಾರು ದಿ. ಭಾರತಿ ಅಮ್ಮನವರ ಸ್ಮರಣಾರ್ಥ ನೂತನ ಬಸ್ ತಂಗುದಾಣ ಲೋಕಾರ್ಪಣೆ

ಬೆಳ್ತಂಗಡಿ : ಗುತ್ತಿಲಾರು ದಿ. ಭಾರತಿ ಅಮ್ಮನವರ ಸ್ಮರಣಾರ್ಥ ನೂತನ ಬಸ್ ತಂಗುದಾಣ ಲೋಕಾರ್ಪಣೆ

- Advertisement -
- Advertisement -

ಬೆಳ್ತಂಗಡಿ : ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗ್ರು ಗ್ರಾಮದ ಕಲ್ಲಮಾಡ ಎಂಬಲ್ಲಿ ಗುತ್ತಿಲಾರು ದಿ. ಭಾರತಿ ಅಮ್ಮನವರ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗೂ ಮೊಮ್ಮಕ್ಕಳ ಕೊಡುಗೆಯಾಗಿ ನಿರ್ಮಿಸಿರುವ ನೂತನ ಬಸ್ ತಂಗುದಾಣವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಆ.8 ರಂದು ಶನಿವಾರ ಲೋಕಾರ್ಪಣೆಗೊಳಿಸಿದರು.

ಬಸ್ ತಂಗುದಾಣವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದ ಶಾಸಕರು, ಸ್ಥಳೀಯರಿಗೆ ಇದರಿಂದ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಪದ್ಮುಂಜ ಸಿ.ಎ. ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ರಘುಪತಿ ಭಟ್ ಅನಾಬೆ, ಅಧ್ಯಕ್ಷ ರಕ್ಷಿತ್ ಪಣೆಕ್ಕರ, ನಿರ್ದೇಶಕ ಪ್ರಭಾಕರ ಗೌಡ ಗುತ್ಯೋಡಿ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ರಾಮಚಂದ್ರ ಭಟ್, ಶಂಕರನಾರಾಯಣ ಭಟ್ ಬಾಂಗೇರು, ರಾಕೇಶ್ ಆಚಾರ್ಯ, ಬಾಲಪ್ಪ ಗೌಡ ದಂಡುಗ, ಗುರುಪ್ರಸಾದ್ ಎಂ. ಮೈರೊಳ್ತಡ್ಕ, ಅಶೋಕ್ ಭಟ್ ಕಾನಿಷ್ಕ, ಗುತ್ತಿಲಾರು ಭಾರತಿ ಅಮ್ಮನವರ ಹಿರಿಯ ಪುತ್ರ ಪದ್ಮನಾಭ ಮುಚ್ಚಿನ್ನಾಯ, ತುಂಗಪ್ಪ ಗೌಡ ದಂಡುಗ, ಶಶಿರಾಜ್ ದಂಡುಗ, ಸಚಿನ್ ಶೆಟ್ಟಿ ಬಾಂಗೇರು, ರಮೇಶ್ ನೆಕ್ಕರಾಜೆ, ದಾಮೋದರ (ಶ್ರೀ ದುರ್ಗಾ ವೆಲ್ಡಿಂಗ್, ಪದ್ಮುಂಜ), ಗಿರಿಯಪ್ಪ ದಂಡುಗ ಹಾಗೂ ರುಕ್ಮಯ ಗೌಡ ದಂಡುಗ ಸೇರಿದಂತೆ ಗುತ್ತಿಲಾರು ಕುಟುಂಬದ ಸಹೋದರ-ಸಹೋದರಿಯರು ಮತ್ತು ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!