Sunday, August 2, 2026
Homeತಾಜಾ ಸುದ್ದಿಕುರುಕಲು ತಿನಿಸು ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ 3 ವರ್ಷದ ಮಗು ಸಾವು

ಕುರುಕಲು ತಿನಿಸು ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ 3 ವರ್ಷದ ಮಗು ಸಾವು

- Advertisement -
- Advertisement -

ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ತಿನಿಸು ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಆಟಿಕೆಯನ್ನು ಆಹಾರವೆಂದು ಭಾವಿಸಿ ನುಂಗಿದ ಪರಿಣಾಮ ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (3) ಎಂಬ ಮೂರು ವರ್ಷದ ಮಗು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದೆ.

ಶನಿವಾರ ಮಗು ಅಳುತ್ತಿದ್ದಾಗ ಸಂಬಂಧಿಕರ ಮಕ್ಕಳು ಸ್ಥಳೀಯ ಅಂಗಡಿಯಿಂದ ಕುರುಕಲು ತಿಂಡಿಯ ಪ್ಯಾಕೆಟ್ ಕೊಡಿಸಿದ್ದು, ಮಕ್ಕಳನ್ನು ಆಕರ್ಷಿಸಲು ಕಂಪನಿಯವರು ಪ್ಯಾಕೆಟ್ ಒಳಗೆ ಇಟ್ಟಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಅನ್ನು ಮಗು ತಿಂಡಿಯೊಂದಿಗೆ ನುಂಗಿದೆ.

ಬಾಲ್ ಗಂಟಲಿನಲ್ಲಿ ಸಿಕ್ಕಿಬಿದ್ದು ಮಗು ಒದ್ದಾಡಲು ಪ್ರಾರಂಭಿಸಿದಾಗ ತಕ್ಷಣ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ. ಏಕೈಕ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಧಾವಿಸಿ ಕಂಬನಿ ಮಿಡಿದಿದ್ದಾರೆ.

ಆಹಾರ ಪದಾರ್ಥಗಳೊಂದಿಗೆ ಇಂತಹ ಅಪಾಯಕಾರಿ ಆಟಿಕೆಗಳನ್ನು ಸೇರಿಸಿ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ವಸ್ತುಗಳನ್ನು ಸೇರಿಸದಂತೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!