Monday, July 13, 2026
HomeUncategorized12 ರೂ. ಚಿಲ್ಲರೆ ಕೊಡದಿದ್ದಕ್ಕೆ ಸಾರಿಗೆ ಸಚಿವ ಭೈರತಿ ಸುರೇಶ್ ಅವರನ್ನೇ ಬಸ್ ನಿಂದ ಕೆಳಗಿಳಿಸಿದ...

12 ರೂ. ಚಿಲ್ಲರೆ ಕೊಡದಿದ್ದಕ್ಕೆ ಸಾರಿಗೆ ಸಚಿವ ಭೈರತಿ ಸುರೇಶ್ ಅವರನ್ನೇ ಬಸ್ ನಿಂದ ಕೆಳಗಿಳಿಸಿದ ಬಿಎಂಟಿಸಿ ಕಂಡಕ್ಟರ್!

- Advertisement -
- Advertisement -

ಬೆಂಗಳೂರಿನ ಬಿಎಂಟಿಸಿ ಬಸ್ ಸಂಚಾರ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲು ಹೋಗಿದ್ದ ಸಾರಿಗೆ ಸಚಿವ ಭೈರತಿ ಸುರೇಶ್ ಅವರನ್ನು ಬಿಎಂಟಿಸಿ ಬಸ್ ಕಂಡಕ್ಟರ್ 12 ರೂಪಾಯಿ ಚಿಲ್ಲರೆ ಕೊಡದೇ ಇದ್ದ ಕಾರಣಕ್ಕೆ ಅರ್ಧ ದಾರಿಯಲ್ಲೇ ಬಸ್ ನಿಂದ ಕೆಳಗೆ ಇಳಿಸಿದ್ದಾರೆ.

ಶನಿವಾರ ರಾತ್ರಿ 2 ಗಂಟೆಗಳ ಕಾಲ ಸುಮಾರು 10 ಬಸ್ ಗಳಲ್ಲಿ ಮಾಸ್ಕ್ ಧರಿಸಿಕೊಂಡು ಪ್ರಯಾಣ ಮಾಡಿದ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ನಡೆಸಿದ್ದಾರೆ.

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿ ಮಾರ್ಗದ ಬಿಎಂಟಿಸಿ ಬಸ್ ಹತ್ತಿದ್ದ ಸಚಿವ ಭೈರತಿ ಸುರೇಶ್ ಎರಡು ಟಿಕೆಟ್ ನೀಡುವಂತೆ ಕೇಳಿ 100 ರೂಪಾಯಿ ನೋಟು ನೀಡಿದ್ದಾರೆ‌. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದ್ದು, ಸಚಿವ ಸುರೇಶ್ ಚಿಲ್ಲರೆ ಇಲ್ಲ ಎಂದಿದ್ದಾರೆ. ತನ್ನ ಬಳಿ ಚಿಲ್ಲರೆ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿ ಬಸ್ ನಿಂದ ಕೆಳಗೆ ಇಳಿಸಿದ್ದಾರೆ.

ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಪ್ರಯಾಣ ಮಾಡಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಚಾಲಕ ಮತ್ತು ಕಂಡಕ್ಟರ್ ಯಾರಿಗೂ ಸಚಿವರು ಎಂಬುದು ಗಮನಕ್ಕೆ ಬಂದಿರಲಿಲ್ಲ.

ಜಯಮಹಲ್ ನಿಂದ ಸಾಗುತ್ತಿದ್ದ ಬಸ್ ಫನ್ ವರ್ಲ್ಡ್ ಸ್ಟಾಪ್ ನಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲುಗಡೆ ಮಾಡಿರಲಿಲ್ಲ. ಇದನ್ನು ಗಮನಿಸಿದ ಹಿಂದಿನ ಬಸ್ ನಲ್ಲಿದ್ದ ಸಚಿವ ಭೈರತಿ ಸುರೇಶ್ ಆ ಬಸ್ ಕಂಡಕ್ಟರ್ ಮತ್ತು ಚಾಲಕರನ್ನು ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಾಗಶೆಟ್ಟಿಹಳ್ಳಿಯಲ್ಲಿ ಆಟೋ ಏರಿದ ಸುಮಾರು ಒಂದು ಕಿಲೋ ಮೀಟರ್ ಪ್ರಯಾಣಿಸಿದ ಸಚಿವರಿಂದ ಆಟೋ ಚಾಲಕ ಆಟೋ ಮೀಟರ್ ನಲ್ಲಿ 30 ರೂಪಾಯಿ ತೋರಿಸಿದರೂ 36 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಕೊನೆಗೆ ಆಟೋ ಚಾಲಕನಿಗೆ ಭೈರತಿ ಸುರೇಶ್ 40 ರೂಪಾಯಿ ನೀಡಿ ಕೆಳಗಿಳಿದಿದ್ದಾರೆ.

- Advertisement -

Latest News

error: Content is protected !!