Saturday, July 4, 2026
Homeತಾಜಾ ಸುದ್ದಿಸುಳ್ಯದಲ್ಲಿ ಸಚಿವ ಯು.ಟಿ.ಖಾದರ್‌ಗೆ ಜು.6 ರಂದು ಸಾರ್ವಜನಿಕ ಅಭಿನಂದನಾ ಸಮಾರಂಭ

ಸುಳ್ಯದಲ್ಲಿ ಸಚಿವ ಯು.ಟಿ.ಖಾದರ್‌ಗೆ ಜು.6 ರಂದು ಸಾರ್ವಜನಿಕ ಅಭಿನಂದನಾ ಸಮಾರಂಭ

- Advertisement -
- Advertisement -

ಕರ್ನಾಟಕ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸುತ್ತಿರುವ ಯು.ಟಿ. ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.

ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರು ರೆವರೆಂಡ್ ಫಾ. ಥೋಮಸ್ ಪಾರೆಕ್ಕಾಟಿಲ್ ಹಾಗೂ ಪೇರಡ್ಕ ಮಸೀದಿಯ ಖತೀಬ್ ಅಹ್ಮದ್ ನಈಮ್ ಫೈಝಿ ಆಶೀರ್ವಚನ ನೀಡಲಿದ್ದಾರೆ. ಅಕಾಡೆಮಿ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಟಿ.ಎಂ. ಶಹೀದ್, ಡಾ. ಕೆ.ವಿ. ರೇಣುಕಾ ಪ್ರಸಾದ್, ಹರೀಶ್ ಇಂಜಾಡಿ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಸೇರಿದಂತೆ ಸೀತಾರಾಮ ರೈ ಸವಣೂರು, ರಾಧಾಕೃಷ್ಣ ಬೊಳ್ಳೂರು, ಜಿ. ಕೃಷ್ಣಪ್ಪ, ಎಂ.ಬಿ. ಸದಾಶಿವ, ಉದ್ಯಮಿ ಕೃಷ್ಣ ಕಾಮತ್ ಮತ್ತು ಎಸ್.ಎನ್. ಮನ್ಮಥ ಅವರಂತಹ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

- Advertisement -

Latest News

error: Content is protected !!