
ಸುಳ್ಯ ಸರಕಾರಿ ಆಸ್ಪತ್ರೆಯ ಪಕ್ಕದ ರಿಕ್ಷಾ ನಿಲ್ದಾಣದ ಎದುರಿನಿಂದಾಗಿ ಜೂನಿಯರ್ ಕಾಲೇಜು ಸಂಪರ್ಕಿಸುವ ರಸ್ತೆಗೆ ವಿದ್ಯುತ್ ಕಂಬ ತೆರವು ಮಾಡದೇ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗಿದ್ದು, ಇದೀಗ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿದ್ದಾರೆ.
ಮೆಸ್ಕಾಂ ಅಧಿಕಾರಿಗಳನ್ನು ಕರೆಸಿಕೊಂಡು ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ಥಳ ಪರಿಶೀಲನೆ ನಡೆಸಿದ್ರು. “ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡದೆ ಈ ರೀತಿ ಕಾಂಕ್ರೀಟ್ ರಸ್ತೆ ಮಾಡಿರುವುದು ಅತ್ಯಂತ ಅಪಾಯಕಾರಿ ಮತ್ತು ಅವೈಜ್ಞಾನಿಕ. ಕೂಡಲೇ ಮೆಸ್ಕಾಂ ಮತ್ತು ಗುತ್ತಿಗೆದಾರರು ಸಮನ್ವಯ ಸಾಧಿಸಿ ರಸ್ತೆ ಮಧ್ಯದಲ್ಲಿರುವ ಕಂಬಗಳನ್ನು ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು” ಎಂದು ಕಡಕ್ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಇದು ಸರಕಾರದಿಂದ ನಿರ್ಮಾಣ ಮಾಡಿದ ರಸ್ತೆಯಲ್ಲ. ಇದು ಲೇಔಟ್ ನವರು ಖಾಸಗಿಯಾಗಿಯಾಗಿ ನಿರ್ಮಿಸಿರುವ ರಸ್ತೆಯಾಗಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಮೆಸ್ಕಾಂ ನವರು ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಪರ್ಮಿಷನ್ ನೀಡಿಲ್ಲ ಎಂದು ತಿಳಿದು ಬಂದಿದೆ ಎಂದರು. ಅಲ್ಲದೆ ಯಾವುದೇ ಪರ್ಮಿಷನ್ ಇಲ್ಲದೆ ರಸ್ತೆ ನಿರ್ಮಾಣ ಮಾಡಿರುವ ಲೇಔಟ್ ಮಾಲಿಕರ ವಿರುದ್ದ ಕ್ರಮಕ್ಕೆ ಶಾಸಕಿ ಸೂಚಿಸಿದರು.


