- Advertisement -


- Advertisement -
ಬೆಳ್ತಂಗಡಿ: ಸಿಂಗರ್ ರಮ್ಲಾನ್ ಅವರು ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಮ್ಲಾನ್ ಅವರ ಈ ಮಾನವೀಯ ಕಾರ್ಯಕ್ಕೆ ಯುವಶಕ್ತಿ ಹೇರ್ ವಿತ್ ಹಾರ್ಟ್ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕ್ಯಾನ್ಸರ್ ಚಿಕಿತ್ಸೆಯ ಸಂದರ್ಭದಲ್ಲಿ ಕೂದಲು ಕಳೆದುಕೊಂಡು ರೋಗಿಗಳಿಗೆ ವಿಗ್ ತಯಾರಿಸಲು ಸಹಕಾರಿಯಾಗುವ ಉದ್ದೇಶದಿಂದ ಅವರು ಸ್ವ ಇಚ್ಛೆಯಿಂದ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.
ಇವರು ಮುಸ್ಲಿಂ ಆಗಿದ್ದರೂ ಕೂಡ ಹಿಂದೂ ಭಕ್ತಿಗೀತೆ ಹಾಡುತ್ತಾ ಕೋಮು ಸೌಹಾರ್ದತಯ ಸಂದೇಶ ಸಾರಿದ್ದಾರೆ. ಸವಣಾಲು ಕಾಳಿ ಬೆಟ್ಟ ಶ್ರೀ ದುರ್ಗಾ ಕಾಳಿಕಾಂಬ ದೇವಿಯ ಪರಮ ಭಕ್ತ ಆಗಿರುವ ಇವರು ಶ್ರೀ ದೇವಿಯ ಅನೇಕ ಭಕ್ತಿಗೀತೆಗಳನ್ನು ರಚಿಸಿ ಹಾಡಿದ್ದಾರೆ.
- Advertisement -


