Sunday, June 28, 2026
HomeUncategorizedಬೆಳ್ತಂಗಡಿ : ಕೊಕ್ಕಡದಲ್ಲಿ ವಾಹನ ದಟ್ಟಣೆಗೆ ಸವಾರರು ಹೈರಾಣು

ಬೆಳ್ತಂಗಡಿ : ಕೊಕ್ಕಡದಲ್ಲಿ ವಾಹನ ದಟ್ಟಣೆಗೆ ಸವಾರರು ಹೈರಾಣು

- Advertisement -
- Advertisement -

ಬೆಳ್ತಂಗಡಿ : ಉಜಿರೆ – ಪೆರಿಯಶಾಂತಿ ಸ್ಪೇರ್ ರಸ್ತೆಯ ಕಾಪಿನಬಾಗಿಲಿನಿಂದ ಕೊಕ್ಕಡ ಜಂಕ್ಷನ್ ತನಕ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಹೈರಾಣಾದ ಘಟನೆ ಜೂ. 28 ರಂದು ನಡೆದಿದೆ.ವಾರಾಂತ್ಯದ ಹಾಗೂ ಸರಣಿ ರಜೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಯಾತ್ರರ್ಥಿಗಳ ಸಂಖ್ಯೆ ಹೆಚ್ಚಿದ ಕಾರಣ ಕೊಕ್ಕಡ ಪೇಟೆಯಿಂದ ಕಾಪಿನಬಾಗಿಲಿನವರೆಗೆ ರಸ್ತೆಯ ಎರಡು ಬದಿ ವಾಹನ ದಟ್ಟಣೆಯಿಂದ ಗಂಟೆಗಟ್ಟಲೆ ಪ್ರಯಾಣಿಕರು ಜಡಿ ಮಳೆಯೊಂದಿಗೆ ರಸ್ತೆ ನಡುವೆ ಸಿಲುಕಿಕೊಂಡಿದ್ದರು. ಬೆಂಗಳೂರು, ಹಾಸನ ಭಾಗದ ಬಸ್ ಗಳು, ಟೂರಿಸ್ಟ್ ವಾಹನ, ಆ ಭಾಗದ ಗ್ರಾಮೀಣ ಪ್ರದೇಶದ ಜನರು ತೀವ್ರ ಸಂಕಷ್ಟ ಅನುಭವಿಸಿದರು.ಸೌತಡ್ಕ ಮಹಾಗಣಪತಿ ಕ್ಷೇತ್ರದ ದ್ವಾರದ ಬಳಿ ಟ್ರಾಫಿಕ್ ಕಿರಿಕಿರಿ ಉಂಟಾಗಿ ಆ ಕಡೆಯಿಂದ ಬರುವ ಹಾಗೂ ಹೋಗುವ ವಾಹನಗಳು ಆಚೆ ಇಚೆ ಹೋಗಲಾರದೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕಿಗೊಂಡಿತ್ತು. ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಪೊಲೀಸರು ಇಲ್ಲದೇ ಬಸ್ ನಿರ್ವಾಹಕರು ಸಾರ್ವಜನಿಕರು ಕ್ಲಿಯರ್ ಮಾಡಬೇಕಾದ ಪರಿಸ್ಥಿತಿ ಇದೆ ಹಾಗಾಗಿ ಪೊಲೀಸ್ ಇಲಾಖೆ ಇಲ್ಲಿಗೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಹೆಚ್ಚಿನ ವಾರಾಂತ್ಯದಲ್ಲಿ ಕೊಕ್ಕಡ ಪೇಟೆ ಟ್ರಾಫಿಕ್ ಜಾಮ್ ಗೆ ಒಳಗಾಗುತ್ತಿದೆ. ಇಂದು ಹಾಲು ತರಲು ಪೇಟೆಗೆ ಹೋದಲ್ಲಿ ವಾಹನ ದಟ್ಟನೆಯಿಂದ ಒಂದು ಗಂಟೆ ಬಳಿಕ ಮನೆ ಸೇರುವ ಪರಿಸ್ಥಿತಿ, ಪ್ರತಿ ಬಾರಿ ಸಮಸ್ಯೆ ಎದುರಿಸುತ್ತಿದ್ದೇವೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!