- Advertisement -


- Advertisement -
ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಚಾರಣ ತಾಣ ಗಡಾಯಿಕಲ್ಲು ಪ್ರವೇಶಕ್ಕೆ ತಾತ್ಕಲಿಕವಾಗಿ ಜೂ.14 ರಿಂದ ಹೇರಿದ್ದ ನಿರ್ಬಂಧ ನಾಳೆ ಜೂ.25 ರಿಂದ ಚಾರಣಿಗರ ಪ್ರವೇಶಕ್ಕೆ ತೆರೆದುಕೊಂಡಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಬೆಳ್ತಂಗಡಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಟ ಅವರು ತಿಳಿಸಿದ್ದಾರೆ.
ಆನ್ಲೈನಲ್ಲಿ ರಿಜಿಸ್ಟ್ರೇಶನ್ ಕಡ್ಡಾಯ: ಗಡಾಯಿಕಲ್ಲು ಪ್ರವೇಶಕ್ಕೆ ಕುದುರೆಮುಖ ನ್ಯಾಷನಲ್ ಪಾರ್ಕ್ ವೆಬ್ ಸೈಟ್‌ನಲ್ಲಿ ನೊಂದವಣಿ ಮಾಡುವುದು ಕಡ್ಡಾಯವಾಗಿದೆ. ಒಂದು ದಿನಕ್ಕೆ 500 ಜನಕ್ಕೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯಯೊಳಗೆ ಮಾತ್ರ ಪ್ರವೇಶಕ್ಕೆ ಅನುಮತಿ ಕಲ್ಪಿಸಲಾಗಿದ್ದು ಇದರ ಮುಂದೆ 500 ಮಂದಿ ಬಂದರೆ ಪ್ರವೇಶವಕಾಶ ಇರುವುದಿಲ್ಲ. 50 ರೂ.ಆಫ್ ಲೈನ್ ಪೆಮೆಂಟ್ ಕಡ್ಡಾಯವಾಗಿದ್ದು, ಫೋಟೋ, ವಿಳಾಸ, ಜನ್ಮದಿನಾಂಕವಿರುವ ಗುರುತಿನ ಚೀಟಿ ಪ್ರವೇಶಕ್ಕೆ ಕಡ್ಡಾಯವಾಗಿದೆ.
- Advertisement -


