Tuesday, June 23, 2026
Homeಕರಾವಳಿಉಡುಪಿಉಡುಪಿ: ಮಕ್ಕಳಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗು ಮಾರಾಟ; ವೈದ್ಯ ಸೇರಿ...

ಉಡುಪಿ: ಮಕ್ಕಳಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗು ಮಾರಾಟ; ವೈದ್ಯ ಸೇರಿ ಇಬ್ಬರು ಅರೆಸ್ಟ್

- Advertisement -
- Advertisement -

ಉಡುಪಿ: ಮಕ್ಕಳಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯ ಸೇರಿ ಇಬ್ಬರನ್ನು ಅರೆಸ್ಟ್ ಉಡುಪಿ ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ। ಸುರೇಂದ್ರ ಕಾಮತ್ ಹಾಗೂ ಮಗುವನ್ನು ಪಡೆದ ಸಂತೆಕಟ್ಟೆ ನೇಜಾರು ನಿವಾಸಿಗಳಾದ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ, ಇತರರ ವಿರುದ್ದ ಪ್ರಕರಣ ದಾಖಲಾಗಿದ್ದು, ವೈದ್ಯರು ಮತ್ತು ಪ್ರಕಾಶ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.

 ಜೂ.19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾ ಕಚೇರಿ (CDPO) ಅಧಿಕಾರಿಯೊಬ್ಬರು ಮಕ್ಕಳ ರಕ್ಷಣ ಘಟಕಕ್ಕೆ ಕರೆ ಮಾಡಿ, ಸಂತೆಕಟ್ಟೆಯ ನೇಜಾರಿನಲ್ಲಿ ಪ್ರಕಾಶ್ ಹಾಗೂ ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣುಮಗುವನ್ನು ತಂದು ಅನಧಿಕೃತವಾಗಿ ಸಾಕುತ್ತಿದ್ದಾರೆ ಎಂದು ದೂರು ನೀಡಿದ್ದರು.

ದೂರು ಆಧರಿಸಿ ಮಕ್ಕಳ ರಕ್ಷಣ ಘಟಕದ ರಕ್ಷಣಾಧಿಕಾರಿ ಯೋಗೀಶ್, ಸುರಕ್ಷಾ ಜತೆ ವಲಯ ಮೇಲ್ವಿಚಾರಕಿ ದೂರು ನೀಡಿದ ಅಧಿಕಾರಿಯೊಂದಿಗೆ ನೇಜಾರಿಗೆ ತೆರಳಿದಾಗ ಅಲ್ಲಿ ದಂಪತಿ ಇರಲಿಲ್ಲ. ಬಳಿಕ ಮಾಹಿತಿ ಮೇರೆಗೆ ಸಂತೆಕಟ್ಟೆಯ ಸುಬ್ರಹ್ಮಣ್ಯನಗರದ ಮನೆಗೆ ತೆರಳಿದಾಗ ಪೂರ್ಣಿಮಾ, ಪತಿ ಪ್ರಕಾಶ್, ಒಂದು ತಿಂಗಳ ಹೆಣ್ಣು ಮಗು ಹಾಗೂ ಪೂರ್ಣಿಮಾ ಅವರ ಹಿರಿಯ ಸಹೋದರಿ ಲಕ್ಷ್ಮೀ ಅವರು ಮನೆಯಲ್ಲಿ ಹಾಜರಿದ್ದರು.ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆರೋಪಿಗಳು ಅನುಮಾನಾಸ್ಪದ ಹೇಳಿಕೆ ನೀಡಿದ್ದು, ಬಳಿಕ ಕೂಲಂಕಷವಾಗಿ ವಿಚಾರಿಸಿದಾಗ ಅಸಲಿಯತ್ತು ಬಾಯ್ಬಿಟ್ಟಿದ್ದಾರೆ.ಅದರಂತೆ ಇಬ್ಬರನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!