Tuesday, June 23, 2026
Homeಕರಾವಳಿಮಂಗಳೂರುಧರ್ಮಸ್ಥಳ : ಸರಕಾರಿ ಉನ್ನತೀಕರಿಸಿದ  ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯಲ್ಲಿ "ಯಕ್ಷಧ್ರುವ- ಯಕ್ಷ ಶಿಕ್ಷಣ ತರಗತಿಗೆ...

ಧರ್ಮಸ್ಥಳ : ಸರಕಾರಿ ಉನ್ನತೀಕರಿಸಿದ  ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯಲ್ಲಿ “ಯಕ್ಷಧ್ರುವ- ಯಕ್ಷ ಶಿಕ್ಷಣ ತರಗತಿಗೆ ಚಾಲನೆ

- Advertisement -
- Advertisement -

ಧರ್ಮಸ್ಥಳ :ಸರಕಾರಿ ಉನ್ನತೀಕರಿಸಿದ  ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, 2026-27ನೇ ಶೈಕ್ಷಣಿಕ ವರ್ಷದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ )ಮಂಗಳೂರು “ಯಕ್ಷಧ್ರುವ- ಯಕ್ಷ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ” ದಿನಾಂಕ  23-06-2026 ರಂದು ಶಾಲೆಯ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ  ಶುಭ ಆರಂಭಗೊಂಡಿತು . ಈ ಕಾರ್ಯಕ್ರಮವು ಶಾಲಾ ಎ ಸ್‌.ಡಿ.ಎಂ.ಸಿ.ಯ ಅಧ್ಯಕ್ಷರು ಶ್ರೀ ಕೆ ನಂದ, ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ ಅಧ್ಯಕ್ಷರು  ಶ್ರೀ ಸುರೇಶ್ ಶೆಟ್ಟಿ ಮತ್ತು ಕಾರ್ಯದರ್ಶಿ ಶಿತಿಕಂಠ ಭಟ್, ಪಟ್ಲ ಪೌಂಡೇಶನ್ ಟ್ರಸ್ಟಿ ಶ್ರೀ ಭುಜಬಲಿ ಧರ್ಮಸ್ಥಳ. ಯಕ್ಷ ತರಗತಿ ಶಿಕ್ಷಕ  ಬೆಳ್ತಂಗಡಿ ತಾಲೂಕು ಶ್ರೀ ಅರುಣ್ ಕುಮಾರ್ ಧರ್ಮಸ್ಥಳ. ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್  ಉಪಸ್ಥಿತಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಯನ್ನು ಪಟ್ಲ ಫೌಂಡೇಶನ್ ಟ್ರಸ್ಟಿ ಶ್ರೀ ಭುಜಬಲಿ, ಉದ್ಘಾಟರಾಗಿ ಶ್ರೀ ಸುರೇಶ್ ಶೆಟ್ಟಿ ಅಧ್ಯಕ್ಷರು ಯಕ್ಷದ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ  ಪಟ್ಲ ಫೌಂಡೇಶನ್ ನ ನಡೆಸುತ್ತಿರುವ ಸಮಾಜಮುಖಿ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ  ಶುಭವನ್ನು ಹಾರೈಸಿದರು. ಪಟ್ಲ ಫೌಂಡೇಶನ್ ತಾಲೂಕು ಘಟಕ ಕಾರ್ಯದರ್ಶಿಯಾದ ಶ್ರೀ ಶಿತಿ ಕಂಠ ಭಟ್ ಇವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಯಕ್ಷದ್ರುವ ಯಕ್ಷ ತರಗತಿಯ ಶಿಕ್ಷಕರಾದ ಶ್ರೀ ಅರುಣ್ ಇವರಿಗೆ ವೀಳ್ಯವನ್ನು ವಿದ್ಯಾರ್ಥಿಗಳಿಂದ  ಹಸ್ತಾಂತರಿಸಲಾಯಿತು.

 ಹಾಗೆಯೇ ಯಕ್ಷಗಾನದ ಪುಸ್ತಕವನ್ನು ಪಟ್ಲ ಫೌಂಡೇಶನ್ ಟ್ರಸ್ಟಿ ಶ್ರೀ ಭುಜಬಲಿ ಇವರ ಮೂಲಕ ಯಕ್ಷ ತರಗತಿ ಶಿಕ್ಷಕರಿಗೆ ಹಸ್ತಾಂತರ ಮಾಡಲಾಯಿತು. ಎಸ್ ಡಿ ಎಂ ಸಿ ಸದಸ್ಯರಾದ ರೂಪೇಶ್ . ಕೆ,ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಶಾಲಾ  ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್  ಸ್ವಾಗತಿಸಿ, ಧನ್ಯವಾದವನ್ನು ಸಹಶಿಕ್ಷಕಿ ಶ್ರೀಮತಿ ವಿಜಯ  , ಅತಿಥಿ ಶಿಕ್ಷಕಿ ಶ್ರೀಮತಿ ಜಯಶ್ರೀ  ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Latest News

error: Content is protected !!