Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆ ಜನೌಷಧಿ ಕೇಂದ್ರದಿಂದ ನಗದು ಹಣ ಕಳ್ಳತನ

ಬೆಳ್ತಂಗಡಿ : ಉಜಿರೆ ಜನೌಷಧಿ ಕೇಂದ್ರದಿಂದ ನಗದು ಹಣ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಉಜಿರೆ ಗ್ರಾಮದ ಬೆಳಾಲು ಕ್ರಾಸ್ ಬಳಿಯಿರುವ ಸುಪ್ರೀಮ್ ಲಾಡ್ಜ್ ಕೆಳಭಾಗದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಕ್ಕೆ ಒಬ್ಬಂಟಿ ಕಳ್ಳನೊಬ್ಬ ಮೇ.29 ರಾತ್ರಿ 12:40 ರಿಂದ ಮೇ.30 ರ ಬೆಳಗ್ಗೆ 8 ಗಂಟೆ ನಡುವೆ ಶಟರ್ ಬೀಗ ಮುರಿದು ಒಳನುಗ್ಗಿ ಕ್ಯಾಶ್ ಡ್ರಾವರ್ ನಲ್ಲಿದ್ದ 3 ದಿನದ ವ್ಯವಹಾರದ 98,460 ರೂಪಾಯಿ ಹಣವನ್ನು ಕಳ್ಳತನ ಮಾಡಿದ್ದಾನೆ.

ಬೆಳ್ತಂಗಡಿ ಪೊಲೀಸರು, ಮಂಗಳೂರಿನಿಂದ ಶ್ವಾನ ದಳ, ಬೆರಳಚ್ಚು ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಜಿರೆ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಮ್ಯಾನೇಜರ್ ಅನಿತಾ ಅವರು ಮೇ.30 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಕಲಂ 305,331(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!