ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಅರ್. ಅಶೋಕ್ ಅವರಿಗೆ ಸರ್ಕಾರಿ ಮನೆ ಹಂಚಿಕೆ ಮಾಡದಿರುವ ವಿಚಾರವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಆರ್. ಅಶೋಕ್, ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಂ. 1 ಕುಮಾರಕೃಪಾ ಪೂರ್ವ ಬೆಂಗಳೂರು, ನಂ 1 ರೇಸ್ ವ್ಯೂ ಕಾಟೇಜ್ ರೇಸ್ ಕೋರ್ಸ್ ರಸ್ತೆ ಬೆಂಗಳೂರು ಮತ್ತು ನಂ 2 ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ ಬೆಂಗಳೂರು ಈ ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡುವಂತೆ ಪತ್ರದ ಮೂಲಕ ಒತ್ತಾಯಿಸಿರುವ ವಿಪಕ್ಷ ನಾಯಕ ಅಶೋಕ್, ಮನೆ ಹಂಚಿಕೆ ಮಾಡದಿದ್ದಲ್ಲಿ ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಮನೆ ಹಂಚಿಕೆ ಮಾಡುವಂತೆ ಅಶೋಕ್ ಸತತವಾಗಿ ಪತ್ರ ಬರೆದಿದ್ದರೂ ಇನ್ನೂ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ.


