ಬೆಳ್ತಂಗಡಿ : ಮೂವರು ಯುವತಿಯರನ್ನು ಜಲಪಾತ ವೀಕ್ಷಣೆಗೆಂದು ಮೇ.20 ರಂದು ಸಂಜೆ ಕರೆತಂದು ಬಳಿಕ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಎಂಬ ಮೂವರು ಯುವಕರನ್ನು ಮೇ.20 ರಂದು ರಾತ್ರಿ ಬೆಳ್ತಂಗಡಿ ಪೋಲಿಸರು ಬಂಧಿಸಿ ಮೇ.21 ರಂದು ಸಂಜೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಸಾಣೆಗೆ ಒಳಪಡಿಸಿ ಬಳಿಕ ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನಾಯ್ಯಾಧೀಶರಾದ ವಿಜೇಯೆಂದ್ರ ಟಿ. ಹೆಚ್ ಅವರು ಮುಂದೆ ಹಾಜರು ಪಡಿಸಲಾಗಿದ್ದು ಮೂವರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ನಡುವೆ ನೊಂದ ಸಂತ್ರಸ್ತ ಮೂವರು ಯುವತಿಯರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಮೇ.21 ರಂದು ಕರೆದುಕೊಂಡು ಹೋಗಿ ಮಧ್ಯಾಹ್ನದಿಂದ ಸಂಜೆಯವರೆಗೆ BNS 183 ಹೇಳಿಕೆ ದಾಖಲಿಸಿದ್ದಾರೆ.


