Saturday, June 6, 2026
Homeಕರಾವಳಿದಿವ್ಯಾಂಗರ ಹಕ್ಕುಗಳು ಹಾಗೂ ಕಲ್ಯಾಣ ಯೋಜನೆಗಳ ಕುರಿತು ಸಕ್ಷಮ ಸಂಸ್ಥೆಯ ವತಿಯಿಂದ ರಾಜ್ಯಪಾಲರಿಗೆ ಮನವಿ

ದಿವ್ಯಾಂಗರ ಹಕ್ಕುಗಳು ಹಾಗೂ ಕಲ್ಯಾಣ ಯೋಜನೆಗಳ ಕುರಿತು ಸಕ್ಷಮ ಸಂಸ್ಥೆಯ ವತಿಯಿಂದ ರಾಜ್ಯಪಾಲರಿಗೆ ಮನವಿ

- Advertisement -
- Advertisement -

ಬೆಳ್ತಂಗಡಿ: ಕನ್ಯಾಡಿಯ ಸಕ್ಷಮ ಸಂಸ್ಥೆಯ ವತಿಯಿಂದ ಅದರ ತಂಡದ ಪ್ರಮುಖರು ಹಾಗೂ ಸೇವಾಭಾರತಿಯ ಅಧ್ಯಕ್ಷ ಮತ್ತು ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಅವರು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋತ್ ಅವರನ್ನು ಮೇ 16 ರಂದು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ದಿವ್ಯಾಂಗರ ಹಕ್ಕುಗಳು, ನ್ಯಾಯಸಮ್ಮತ ಸೌಲಭ್ಯಗಳ ಒದಗಿಕೆ, ಕನಿಷ್ಠ ವೇತನ ಜಾರಿ, ಮಾಸಾಶನ ಹೆಚ್ಚಳ ಹಾಗೂ ವಿಶೇಷ ನಿಧಿ ರಚನೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಅದರ ಜೊತೆಗೆ, ವಿಶೇಷ ಚೇತನರ ಕಲ್ಯಾಣ, ಸ್ವಾವಲಂಬನೆ ಹಾಗೂ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಖಚಿತಪಡಿಸಲು ಸರ್ಕಾರ ಸೂಕ್ತ ಯೋಜನೆಗಳು ಮತ್ತು ವಿಶೇಷ ಚೇತನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಸರ್ಕಾರ ತ್ವರಿತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

- Advertisement -

Latest News

error: Content is protected !!