Thursday, June 4, 2026
Homeಕರಾವಳಿಮೇ 15ರಿಂದ 17ರವರೆಗೆ 'ವಿಂಟೇಜ್ ವೈಬ್ಸ್' ವಸ್ತು ಪ್ರದರ್ಶನ

ಮೇ 15ರಿಂದ 17ರವರೆಗೆ ‘ವಿಂಟೇಜ್ ವೈಬ್ಸ್’ ವಸ್ತು ಪ್ರದರ್ಶನ

- Advertisement -
- Advertisement -

ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಮೇ 15ರಿಂದ 17ರವರೆಗೆ ಮೂರು ದಿನಗಳ ಕಾಲ ‘ವಿಂಟೆಜ್ ವೈಬ್ಸ್’ ಎಂಬ ಪುರಾತನ ವಸ್ತುಗಳ ವಿಶೇಷ ಪ್ರದರ್ಶನ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಫಿಲಾಟೆಲಿಕ್ಸ್ ಮತ್ತು ನುಮಿಸ್ ಮೆಟಿಕ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಪ್ರದರ್ಶನದಲ್ಲಿ ಅಪರೂಪದ ನಾಣ್ಯಗಳು, ಕರೆನ್ಸಿ ನೋಟುಗಳು, ಅಂಚೆ ಚೀಟಿಗಳು, ಪುರಾತನ ಗಡಿಯಾರಗಳು ಮತ್ತು ಕಲಾಕೃತಿಗಳು ಸೇರಿದಂತೆ ಸುಮಾರು 19 ಬಗೆಯ ವಿಶಿಷ್ಟ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ.

ಇಂದಿನ ಮಕ್ಕಳಿಗೆ ಮತ್ತು ಯುವಜನತೆಗೆ ಗತಕಾಲದ ವಿಸ್ಮಯಗಳನ್ನು ಹತ್ತಿರದಿಂದ ಪರಿಚಯಿಸಿ, ಇತಿಹಾಸದ ಮಹತ್ವವನ್ನು ತಿಳಿಸಿಕೊಡುವುದು ಈ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ಕಾಮತ್ ತಿಳಿಸಿದ್ದಾರೆ.

- Advertisement -

Latest News

error: Content is protected !!