Monday, June 8, 2026
HomeUncategorizedಬೆಳ್ತಂಗಡಿ : ಆಂಬುಲೆನ್ಸ್ ನಲ್ಲಿಯೇ ಮೆಡಿಕಲ್ ಸಾಮಾಗ್ರಿಗಳ ಸಾಗಾಟ: ರೋಗಿಗಳ ಬಗ್ಗೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಿಲ್ಲ...

ಬೆಳ್ತಂಗಡಿ : ಆಂಬುಲೆನ್ಸ್ ನಲ್ಲಿಯೇ ಮೆಡಿಕಲ್ ಸಾಮಾಗ್ರಿಗಳ ಸಾಗಾಟ: ರೋಗಿಗಳ ಬಗ್ಗೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಿಲ್ಲ ಚಿಂತೆ

- Advertisement -
- Advertisement -

ಬೆಳ್ತಂಗಡಿ : ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್ ವಾಹನವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರು ಮೆಡಿಕಲ್ ಸಾಮಾಗ್ರಿಗಳನ್ನು ಸಾಗಾಟ ಮಾಡಿಸಲು ಮತ್ತು ಠಾಣೆಗಳಿಗೆ ಪ್ರಕರಣಗಳ ಬಗ್ಗೆ ಸೂಚನಾ ಪತ್ರ ನೀಡಲು ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಸಾಕ್ಷಿ ಸಮೇತ ಫೋಟೋ, ವಿಡಿಯೋಗಳು ಸಮೇತ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಲಭ್ಯವಾಗಿದೆ.

ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ರೋಗಿಗಳಿಗೆ ಮೆಡಿಕಲ್ ವಸ್ತುಗಳ ಸಮಸ್ಯೆ ಕಾಡುತ್ತಿತ್ತು. ಈ ನಡುವೆ ಮೇ.8 ರಂದು ಬೆಳ್ತಂಗಡಿ ಆಸ್ಪತ್ರೆಯ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಎಂಬವರ ಆದೇಶದ ಮೇರೆಗೆ ಔಷಧಿ ವಿಭಾಗದ ವ್ಯವಸ್ಥಾಪಕ ಚಂದ್ರಶೇಖರ್ ಎಂಬವರು ಮೆಡಿಕಲ್ ಸಾಮಾಗ್ರಿಗಳನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಹಿಂಭಾಗದ ಔಷದಿ ಉಗ್ರಾಣದಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರಲು ರೋಗಿಗಳನ್ನು ಸಾಗಿಸುವ ಆಸ್ಪತ್ರೆಯ KA-70-G-0005 ಸಂಖ್ಯೆಯ ಟಿಟಿ ವಾಹನ ಆಂಬುಲೆನ್ಸ್ ಉಪಯೋಗಿಸಿದ್ದಾರೆ. ಈ ರೀತಿಯ ಮೆಡಿಕಲ್ ಸಾಗಾಟವನ್ನು ವೈದ್ಯರು ಮಾಡುವುದು ಇದೆ ಮೊದಲಲ್ಲ ಹಲವಾರು ಬಾರಿ ಈ ರೀತಿಯಲ್ಲಿ ಆಂಬುಲೆನ್ಸ್ ನಲ್ಲಿ ಮೆಡಿಕಲ್ ಸಾಮಗ್ರಿಗಳನ್ನು ಸಾಗಾಟ ಮಾಡಿದ್ದಾರೆ.  ಮೆಡಿಕಲ್ ಸಾಮಾಗ್ರಿ ಹಾಕಿ ಸಾಗಾಟ ಮಾಡಿರುವುದರಿಂದ ಆಂಬುಲೆನ್ಸ್ ವಾಹನದ ಒಳಗಿರುವ ಸ್ಟ್ರೆಚರ್ ಹಾಗೂ ಇನ್ನಿತರ ವಸ್ತುಗಳಿಗೆ ಹಾನಿಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

ಮೆಡಿಕಲ್ ಸಾಮಾಗ್ರಿಗಳನ್ನು ಸಾಗಾಟ ಮಾಡಲು ಬೇರೆಯೇ ವಾಹನಗಳು ಇದೆ ಆದ್ರೆ ಅದನ್ನು ಬಳಕೆ ಮಾಡುವುದಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಅಪರಾಧ ಪ್ರಕರಣಗಳಲ್ಲಿ ದಾಖಲಾಗುವ ರೋಗಿಗಳ ಬಗ್ಗೆ ಸಂಬಂಧಪಟ್ಟ  ಪೊಲೀಸ್ ಠಾಣೆಗಳಿಗೆ ‘ಸೂಚನಾ ಪತ್ರ ‘ವನ್ನು ತಲುಪಿಸಲು ಡಿ ಗ್ರೂಪ್ ನೌಕರರಿಗೆ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಅವರು ಟಿಟಿ ಆಂಬುಲೆನ್ಸ್ ವಾಹನವನ್ನೇ ಕಳುಹಿಸಿಕೊಡುತ್ತಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೆಲ ವೈದ್ಯರು ಮಾಡುವ ಕರ್ತವ್ಯ ನಿರ್ಲಕ್ಷ್ಯಕ್ಕೆ ಬ್ರೇಕ್ ಹಾಕಲು ಯಾರ ಹಿರಿಯ ಅಧಿಕಾರಿಗಳು ಮುಂದೆ ಬಾರದೆ ಇರುವುದು ಇದಕ್ಕೆಲ ಕಾರಣ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

- Advertisement -

Latest News

error: Content is protected !!