Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ಮನೆಯವರು ಮಲಗಿದ್ದಾಗ ಬೆಳಗ್ಗಿನ ಜಾವ ಯುವತಿ ಮನೆಯಿಂದ ನಾಪತ್ತೆ; ಪತ್ತೆಗೆ ಲುಕ್ ಔಟ್ ನೋಟಿಸ್...

ಮಂಗಳೂರು: ಮನೆಯವರು ಮಲಗಿದ್ದಾಗ ಬೆಳಗ್ಗಿನ ಜಾವ ಯುವತಿ ಮನೆಯಿಂದ ನಾಪತ್ತೆ; ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ

- Advertisement -
- Advertisement -

ಮಂಗಳೂರು: ಮನೆಯವರು ಮಲಗಿದ್ದಾಗ ಬೆಳಗ್ಗಿನ ಜಾವ ಯುವತಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ನರಿಂಗಾನ ಗ್ರಾಮದಲ್ಲಿ ನಡೆದಿದೆ.  ಇಬ್ರಾಹಿಂ ಎಂ ಅವರ ಮಗಳು ರಾಭಿಯತುಲ್ ಅಧಭಿಯ(19) ನಾಪತ್ತೆಯಾದ ಯುವತಿ.

ಆಕೆಯ ತಂದೆ ನೀಡಿದ ದೂರಿನ ಪ್ರಕಾರ, ಮೇ 3 ರ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಊಟದ ನಂತರ ಮಲಗಲು ಹೋಗಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೋಮವಾರ ಬೆಳಗಿನ ಜಾವ 2:30 ಕ್ಕೆ ಇಬ್ರಾಹಿಂ ಮಂಗಳೂರು ಡಾಕ್‌ಗೆ ಕೆಲಸಕ್ಕೆ ಹೋಗಲು ಎದ್ದಾಗ, ತನ್ನ ಮಗಳು ತನ್ನ ಕೋಣೆಯಲ್ಲಿ ಇಲ್ಲದಿರುವುದು ಮತ್ತು ಅಡುಗೆಮನೆಯ ಹಿಂಬಾಗಿಲು ತೆರೆದಿರುವುದು ಕಂಡುಬಂದಿದೆ. ಸ್ಥಳೀಯ ಎಲ್ಲಾ ಪ್ರದೇಶಗಳನ್ನು ಹುಡುಕಿದರೂ ಮತ್ತು ಸಂಬಂಧಿಕರೊಂದಿಗೆ ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ.

ಈ ಕುರಿತು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಯುವತಿಯ ಕುರಿತು ಮಾಹಿತಿ ಇದ್ದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿಯನ್ನು 0824-2220800 ಅಥವಾ ಕೊಣಾಜೆ ಪೊಲೀಸ್‌ ಠಾಣೆಯನ್ನು 0824-2220536 ಅಥವಾ 9480802350 ಗೆ ಸಂಪರ್ಕಿಸಲು ಕೋರಲಾಗಿದೆ.

ರಾಭಿಯತುಲ್ ಅಧಭಿಯ ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಳು. 4.6 ಅಡಿ ಎತ್ತರವಿದ್ದು, ಕೊನೆಯ ಬಾರಿಗೆ ನೋಡಿದಾಗ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ್ದಳು ಎಂದು ಹೇಳಲಾಗಿದೆ.

- Advertisement -

Latest News

error: Content is protected !!