Wednesday, June 3, 2026
Homeಕರಾವಳಿಮಂಗಳೂರುಪುತ್ತೂರು: ಕಾರು ತಡೆದು ಅರ್ಚಕನಿಗೆ ಅಪರಿತಚಿತ ವ್ಯಕ್ತಿಯಿಂದ ಹಲ್ಲೆ

ಪುತ್ತೂರು: ಕಾರು ತಡೆದು ಅರ್ಚಕನಿಗೆ ಅಪರಿತಚಿತ ವ್ಯಕ್ತಿಯಿಂದ ಹಲ್ಲೆ

- Advertisement -
- Advertisement -

ಪುತ್ತೂರು: ಅಪರಿತಚಿತ ವ್ಯಕ್ತಿಯೊಬ್ಬ ಕಾರು ತಡೆದು ಅರ್ಚಕನಿಗೆ  ಹಲ್ಲೆ ಮಾಡಿರುವ ಘಟನೆ ಮೇ 4ರಂದು ರಾತ್ರಿ ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ. ಕಬಕ ವಿದ್ಯಾಪುರ ನಿವಾಸಿ ಬಾಲಕೃಷ್ಣ ಜೋಯಿಸ ಅವರ ಪುತ್ರ ಗಣೇಶ್ ವಿ(39) ಹಲ್ಲೆಗೊಳಗಾದವರು.

ಗಣೇಶ ಅವರು ಮೇ 4ರಂದು ತಾನು ಕಾರಲ್ಲಿ(ಕೆಎ01-ಎಂಎಲ್ 9704)ರಲ್ಲಿ ಕಲ್ಲಡ್ಕದ ಉಮಾಶಿವ ಕ್ಷೇತ್ರ ದೇವಸ್ಥಾನದ ಪೂಜೆಗೆಂದು ತೆರಳಿ ವಾಪಸ್ ಮನೆಗೆ ಬರುವಾಗ ಕಬಕ ಗ್ರಾಮದ ವಿದ್ಯಾಪುರಕ್ಕೆ ತಲುಪಿದಾಗ ರಸ್ತೆ ಬದಿಯಲ್ಲಿರುವ ಮನೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ರಸ್ತೆಯಲ್ಲಿ ಜನರು ಮತ್ತು ವಾಹನ ದಟ್ಟಣೆ ಇದ್ದುದರಿಂದ ತಾನು ನಿಧಾನವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಕಾರನ್ನು ಅಕ್ರಮವಾಗಿ ಏಕಾಏಕಿ ತಡೆದು ನಿಲ್ಲಿಸಿದಾಗ ನಾನು ಕಾರಿನ ಗ್ಲಾಸನ್ನು ಇಳಿಸಿದ್ದು ಆ ಸಮಯ ಆತ ನನ್ನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಾನು ಕಾರಿನಿಂದ ಇಳಿದಾಗ ಆತ ಹೊಡೆದು ಕಾಲಿನಿಂದ ತುಳಿದು ನೋವು ಉಂಟು ಮಾಡಿ, ನನ್ನ ಮೇಲೆ ಕೇಸು ಮಾಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ ಅಲ್ಲಿಂದ ಹೋಗಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಗೊಳಗಾದ ಗಣೇಶ್ ಭಟ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಅರುಣ್ ಕುಮಾರ್ ಪುತ್ತಿಲರವರು ಭೇಟಿ ನೀಡಿ ಗಣೇಶ್ ಭಟ್ ರವರ ಆರೋಗ್ಯ ಕ್ಷೇಮ ವಿಚಾರಿಸಿದ್ದಾರೆ.

- Advertisement -

Latest News

error: Content is protected !!