Thursday, June 4, 2026
Homeಕರಾವಳಿಉಡುಪಿಉಡುಪಿ : ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಉಡುಪಿ : ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

- Advertisement -
- Advertisement -

ಉಡುಪಿ : ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಘಟನೆ ಕಟಪಾಡಿ-ಶಿರ್ವ ಮುಖ್ಯ ರಸ್ತೆಯ ಪಂಜಿಮಾರು-ಕೊಡುಗುಡ್ಡೆ ಬಳಿ ನಡೆದಿದೆ.  ಕಾರಿನಲ್ಲಿದ್ದ ಐವರು ಯುವಕರು ಪವಾಡಸದೃಶವಾಗಿ ಅಪಾಯವಿಲ್ಲದೆ ಪಾರಾಗಿದ್ದಾರೆ.

 ಉಡುಪಿಯ ವಾಹನ ಶೋರೂಂ ಒಂದರ ಉದ್ಯೋಗಿಗಳಾಗಿದ್ದ ಈ ಯುವಕರು ಬೆಳ್ಮಣ್ ನಲ್ಲಿ ನಡೆಯುವ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.ಪಂಜಿಮಾರು-ಕೊಡುಗುಡ್ಡೆ ಭಾಗದಲ್ಲಿ ಹಾದುಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಎದುರು ಬದಿಯ ರಸ್ತೆ ಬದಿಯ ಚರಂಡಿಗೆ ಇಳಿದು ನಿಂತಿದೆ. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ.

- Advertisement -

Latest News

error: Content is protected !!