- Advertisement -
![]()
- Advertisement -
ಮಂಗಳೂರು; ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ತೋಟಬೆಂಗ್ರೆಯಲ್ಲಿ ನಡೆದಿದೆ. ಪವಿತ್ರ ಖಾರ್ವಿ (25) ನಾಪತ್ತೆಯಾದ ಯುವತಿ. ಪವಿತ್ರಾ ಎಪ್ರಿಲ್ 25 ರಂದು ನಾಪತ್ತೆಯಾಗಿರುವ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವಿತ್ರ ಖಾರ್ವಿ ಅವರಿಗೆ ಮದುವೆ ನಿಶ್ಚಯವಾಗಿದ್ದು, ಮನೆಯವರು ಕುಂದಾಪುರಕ್ಕೆ ತೆರಳಿ ಮನೆಗೆ ವಾಪಾಸು ಬಂದು ಮಲಗಿದ್ದ ಸಂದರ್ಭದಲ್ಲಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ನಾಪತ್ತೆಯಾದ ಯುವತಿಯ ಕುರಿತು ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -


