Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಬ್ಯಾಗ್ ನಲ್ಲಿದ್ದ ₹6.24 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು...

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಬ್ಯಾಗ್ ನಲ್ಲಿದ್ದ ₹6.24 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಹಣವಿದ್ದ ಪರ್ಸ್ ಕಳ್ಳತನ

- Advertisement -
- Advertisement -

ಬೆಳ್ತಂಗಡಿಯಿಂದ ಬಿ.ಸಿ. ರೋಡ್‌ಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಬ್ಯಾಗ್‌ನಿಂದ ಸುಮಾರು ₹6.24 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವಿದ್ದ ಪರ್ಸ್ ಕಳವಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ನಿವಾಸಿ ಕ್ರಿಸ್ತಿನ್ ವೇಗಸ್ (63) ಅವರು ತನ್ನ ಪತಿಯೊಂದಿಗೆ ಉಜಿರೆಯಲ್ಲಿ ಸಂಬಂಧಿಕರ ಮೆಹಂದಿ ಕಾರ್ಯಕ್ರಮ ಮುಗಿಸಿ ಶನಿವಾರ ಸಂಜೆ ಮನೆಗೆ ಮರಳುತ್ತಿದ್ದರು. ಸಂಜೆ 5.00 ಗಂಟೆಗೆ ಬೆಳ್ತಂಗಡಿಯಿಂದ ಮಂಗಳೂರು ಕಡೆಗೆ ಸಾಗುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದ ಇವರು, ಚಾಲಕನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಸಂಜೆ 5.50ರ ಸುಮಾರಿಗೆ ಬಿ.ಸಿ. ರೋಡ್‌ನಲ್ಲಿ ಬಸ್ಸಿನಿಂದ ಇಳಿದು ಬ್ಯಾಗ್ ಪರಿಶೀಲಿಸಿದಾಗ, ಅದರ ಒಳಗಿದ್ದ ಚಿಕ್ಕ ಪರ್ಸ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಪರ್ಸ್‌ನಲ್ಲಿ 5 ½ ಪವನ್ ತೂಕದ ಚಿನ್ನದ ಕರಮಣಿ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ ಸೇರಿದಂತೆ ಒಟ್ಟು 48 ಗ್ರಾಂ ಚಿನ್ನಾಭರಣ ಹಾಗೂ ₹3,500 ನಗದು ಹಣವಿತ್ತು. ಇದರ ಒಟ್ಟು ಮೌಲ್ಯ ಸುಮಾರು ₹6,24,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!