Friday, August 28, 2026
Homeಕರಾವಳಿಮಂಗಳೂರುಉಡುಪಿ; ಆಚಾರ್ಯಾಸ್ ಏಸ್ ನಲ್ಲಿ ಪಿಯುಸಿ ರ್ಯಾಂಕ್ ವಿಜೇತರಿಗೆ ಸನ್ಮಾನ

ಉಡುಪಿ; ಆಚಾರ್ಯಾಸ್ ಏಸ್ ನಲ್ಲಿ ಪಿಯುಸಿ ರ್ಯಾಂಕ್ ವಿಜೇತರಿಗೆ ಸನ್ಮಾನ

- Advertisement -
- Advertisement -

ಉಡುಪಿ; ಹತ್ತನೇ ತರಗತಿ,ಪಿಯುಸಿ ಸಿಇಟಿ ನೀಟ್ ಹಾಗೂ ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಆಯೋಜಿಸಿ ಅತ್ಯುತ್ತಮ ಫಲಿತಾಂಶ ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ ಏಸ್ ಸಂಸ್ಥೆಯಲ್ಲಿ ರಾಂಕ್ ವಿಜೇತರಿಗೆ ಅಭಿನಂದನಾ ಸಮಾರಂಭ ನೆರವೇರಿತು.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜರಗಿದ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ಮತ್ತು ಹತ್ತನೇ ರಾಂಕ್ ಪಡೆದ ಸ್ನೇಹ ಹಾಗೂ ರೆಹಾನ್ ಅವರನ್ನು ಅಭಿನಂದಿಸಲಾಯಿತು.

ಈ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ವಿದ್ವಾನ್ ಶ್ರೀಸೊಂಡೂರು ಪ್ರಹ್ಲಾದ್ ಆಚಾರ್ಯ,ಪತ್ರಕರ್ತ ಹಾಗೂ ಪ್ರಸಿದ್ಧ ಛಾಯಾಚಿತ್ರಗ್ರಾಹಕರಾದ ಶ್ರೀಜನಾರ್ದನ ಕೊಡವೂರು,ಇಮೇಜ್ ಮೊಬೈಲ್ಸ್ ಸಂಸ್ಥೆಯ ಮಾಲೀಕರಾದ ಶ್ರೀಯಾದವ,ಶ್ರೀ ಧನುಷ್, ಕೆಮಿಸ್ಟ್ರಿ ಪ್ರಾಧ್ಯಾಪಕಿ ಶ್ರೀಮತಿ ಶಶಿಕಲಾ ಅವರು ರಾಂಕ್ ವಿಜೇತರನ್ನು ಸನ್ಮಾನಿಸಿದರು.

ಶ್ರೀಜನಾರ್ಧನ ಕೊಡವೂರು ಸಾಂದರ್ಭಿಕವಾಗಿ ಮಾತನಾಡಿ ರಾಂಕ್ ವಿಜೇತರಾದ ಸ್ನೇಹ ಹಾಗೂ ರೆಹಾನ್ ಅವರ ಸಾಧನೆಯು ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.ಸಂಸ್ಥೆಯ ನಿರ್ದೇಶಕ ಶ್ರೀಅಕ್ಷೋಭ್ಯ ಸ್ವಾಗತಿಸಿದರು.ಏಸ್ ಸಂಸ್ಥೆಯ ಸ್ಥಾಪಕ ಲಾತವ್ಯ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು.

ಪ್ರಕೃತ ರಾಂಕ್ ವಿಜೇತರಾದ ಸ್ನೇಹ ಹಾಗೂ ರೆಹಾನ್ ಸೇರಿದಂತೆ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಆಚಾರ್ಯಾಸ್ ಏಸ್ ಸಂಸ್ಥೆಯ ಮುಖಾಂತರ ಸಿಇಟಿ ನೀಟ್ ಪಿಯುಸಿ,ಹಾಗೂ ಹತ್ತನೇ ತರಗತಿಯ ವಿಷಯವಾಗಿ ತರಬೇತಿಯನ್ನು ಕಳೆದ ಒಂದುವರ್ಷದಿಂದ ಪಡೆಯುತ್ತಿದ್ದಾರೆ.2026-27 ರ ಸಾಲಿನ ಸಿಐಟಿ ನೀಟ್,ಪಿಯುಸಿ ಹಾಗೂ ಹತ್ತನೇ ತರಗತಿಯ ತರಬೇತಿಯು ಆರಂಭಗೊಂಡಿದೆ.ಆಸಕ್ತರು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮಿವೆಂಕಟರಮಣ ದೇವಾಲಯದ ಸಮೀಪವಿರುವ ಏಸ್ ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!