Friday, June 5, 2026
Homeಶಿವಮೊಗ್ಗಬರ್ತಡೇ ಪಾರ್ಟಿಯಲ್ಲಿ ಚಿಕನ್ ಸವಿಯುತ್ತಿದ್ದಾಗ ಗಂಟಲಲ್ಲಿ ಮೂಳೆ ಸಿಲುಕಿ ಯುವಕ ಸಾವು

ಬರ್ತಡೇ ಪಾರ್ಟಿಯಲ್ಲಿ ಚಿಕನ್ ಸವಿಯುತ್ತಿದ್ದಾಗ ಗಂಟಲಲ್ಲಿ ಮೂಳೆ ಸಿಲುಕಿ ಯುವಕ ಸಾವು

- Advertisement -
- Advertisement -

ಶಿವಮೊಗ್ಗ:  ಬರ್ತಡೇ ಪಾರ್ಟಿಯಲ್ಲಿ ಚಿಕನ್ ಸವಿಯುತ್ತಿದ್ದಾಗ ಗಂಟಲಲ್ಲಿ ಮೂಳೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಚಿನ್ (21) ಮೃತ ಯುವಕ. ಗ್ರಾಮಸ್ಥರೊಬ್ಬರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವಾರ (ಏ.17) ರಾತ್ರಿ ಗ್ರಾಮದ ಹೊರವಲಯದ ನಿರ್ಮಾಣ ಹಂತದ ಮನೆಯೊಂದರ ಬಳಿ ನಾನ್​ ವೆಜ್​ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವೇಳೆ ಸಚಿನ್, ಊಟ ಮುಗಿಸಿಕೊಂಡು ಪಕ್ಕದಲ್ಲೇ ಕಾಮಗಾರಿ ನಡೆಯುತ್ತಿದ್ದ ನಿರ್ಮಾಣ ಹಂತದ ಮನೆಯೊಳಗೆ ತೆರಳಿದ್ದನು. ಊಟದ ಬಳಿಕ ಉಳಿದವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ವಾಪಸ್ಸಾಗಿದ್ದರು. ಶುಕ್ರವಾರ (ಏ.18) ಮುಂಜಾನೆ ಕಾಮಗಾರಿ ಮುಂದುವರಿಸಲು ಕೆಲಸಗಾರರು ಕಟ್ಟಡದ ಬಳಿ ಬಂದಾಗ, ಸಚಿನ್ ಅಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ವಿಚಾರ ತಿಳಿದ ತಕ್ಷಣ ಸಚಿನ್‌ನ ಕುಟುಂಬದವರು ಆತಂಕಗೊಂಡು ಶವವನ್ನು ಶಿವಮೊಗ್ಗಕ್ಕೆ ಕೊಂಡೊಯ್ದಿದ್ದರು. ಘಟನೆಯ ಕುರಿತು ಗ್ರಾಮಸ್ಥರು ಕುಂಸಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮೃತ ಸಚಿನ್ ಮದ್ಯಪಾನ ಮಾಡಿದ್ದ. ಆತನ ಗಂಟಲಲ್ಲಿ ಆಹಾರ ಸಿಲುಕಿಕೊಂಡಿದ್ದೇ ಈ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!