Saturday, June 6, 2026
Homeಆರಾಧನಾಉಡುಪಿ ಕೃಷ್ಣಮಠದಲ್ಲಿ ಸೌರಮಾನ ಯುಗಾದಿ ಆಚರಣೆ

ಉಡುಪಿ ಕೃಷ್ಣಮಠದಲ್ಲಿ ಸೌರಮಾನ ಯುಗಾದಿ ಆಚರಣೆ

- Advertisement -
- Advertisement -

ಉಡುಪಿ: ಸೌರಮಾನ ಯುಗಾದಿಯ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ವೈದಿಕ ಮತ್ತು ಜನಪದ ಸಂಪ್ರದಾಯದಂತೆ  ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಪಂಚಾಂಗ ಶ್ರವಣ, ಮಹೋತ್ಸವ ಜರುಗಿತು.

ಉಡುಪಿಯಲ್ಲಿ ಸೌರಮಾನ ಪದ್ಧತಿಯಂತೆ ಯುಗಾದಿಯನ್ನು ಆಚರಿಸಲಾಗಿದ್ದು, ಕೃಷ್ಣ ದೇವರ ಮಠದಲ್ಲಿ ಜ್ಯೋತಿಷ್ಯರ ಮೂಲಕ ವರ್ಷದ ಗ್ರಹಗತಿಗಳನ್ನು ತಿಳಿಯಲು ಭಕ್ತಗಣ ಉತ್ಸುಕತೆಯಿಂದ ಭಾಗವಹಿಸಿದ್ದರು.

ಕೃಷ್ಣ ದೇವರ ಸಮ್ಮುಖದಲ್ಲಿರುವ ಚಂದ್ರಶಾಲೆಯಲ್ಲಿ ಪುರೋಹಿತರಾದ ಸುದರ್ಶನ ಆಚಾರ್ಯರು ಪಂಚಾಂಗ ಶ್ರವಣ ನಡೆಸಿದರು. ಶೀರೂರು, ಪೇಜಾವರ, ಕೃಷ್ಣಾಪುರ, ಕಾಣಿಯೂರು ಮಠಾಧೀಶರು ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾಗಿಯಾದ್ದರು. ಪಂಚಾಂಗ ಪಠಣದ ಬಳಿಕ ರಥಬೀದಿಯಲ್ಲಿ ಸುವರ್ಣ ರಥೋತ್ಸವವು ನಡೆಯಿತು. ದಿವಾನರಾದ ಡಾ. ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.

- Advertisement -

Latest News

error: Content is protected !!