- Advertisement -
![]()
- Advertisement -
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಆದಿಚುಂಚನಗಿರಿ ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದರು.
ನಂತರದಲ್ಲಿ ಕಾಲಭೈರವೇಶ್ವರನಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿಗೆ ಆದಿಚುಂಚನಗಿರಿ ಶ್ರೀಗಳು ತಿಲಕವಿಟ್ಟು ಆಶೀರ್ವದಿಸಿದರು.
ದೇಗುಲ ಉದ್ಘಾಟನೆ ಬಳಿಕ ಭೈರವೈಕ್ಯ ಬಾಲಗಂಗಾಧರನಾಥ ಶ್ರೀ ಮೂರ್ತಿಗೆ ಮೋದಿ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ದೇಗುಲ ವೀಕ್ಷಿಸಿದರು.
ಈ ವೇಳೆ, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಧಾನಿಗೆ ಸಾಥ್ ನೀಡಿದರು.
- Advertisement -


