Saturday, June 13, 2026
Homeಅಪರಾಧಡ್ರಗ್‌ ಓವರ್‌ ಡೋಸ್‌ ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಮೃತ್ಯು!

ಡ್ರಗ್‌ ಓವರ್‌ ಡೋಸ್‌ ನಿಂದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಮೃತ್ಯು!

- Advertisement -
- Advertisement -

ಮುಂಬೈ: ಇಬ್ಬರು ಎಂಬಿಎ ವಿದ್ಯಾರ್ಥಿಗಳು ಡ್ರಗ್‌ ಓವರ್‌ ಡೋಸ್‌ನಿಂದ ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಗೋರೆಗಾಂವ್‌ನ ನೆಸ್ಕೋ ಕೇಂದ್ರದಲ್ಲಿ ಏಪ್ರಿಲ್‌ 11ರ ರಾತ್ರಿ  ನಡೆದ ಮ್ಯೂಸಿಕ್‌ ಪಾರ್ಟಿಯಲ್ಲಿ ವಿದ್ಯಾರ್ಥಿಗಳು ಸುಮಾರು 4,000 ಜನರು 2,000 ರೂ. ಪ್ರವೇಶ ಶುಲ್ಕ ಪಾವತಿಸಿ ಭಾಗವಹಿಸಿದ್ದರು. ಏ.11 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೂವರು ವಿದ್ಯಾರ್ಥಿಗಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.

ಈ ವೇಳೆ 24 ವರ್ಷದ ಯುವತಿ, 28 ವರ್ಷದ ಓರ್ವ ಯುವಕ ಸಾವನ್ನಪ್ಪಿದ್ದಾರೆ. 25 ವರ್ಷದ ಮತ್ತೊರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ. ಪಾರ್ಟಿಯಲ್ಲಿ ಪಾಲ್ಗೊಂಡ ಕೆಲವರು ನಿಷೇಧಿತ MDMA ಡ್ರಗ್‌ ಸೇವನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಪೊಲೀಸ್‌ ಮೂಲಗಳ ಪ್ರಕಾರ, ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಲ್ಲಿ  ಒಬ್ಬರು ಕಾರ್ಯಕ್ರಮಕ್ಕೆ ಹೋಗುವಾಗ ಟ್ಯಾಕ್ಸಿಯಲ್ಲೇ ಕುಳಿತು ಒಂದು ಮಾತ್ರೆ ಸೇವಿಸಿದ್ದರು. ಕಾರ್ಯಕ್ರಮದಲ್ಲಿ ಮತ್ತೊಂದು ಮಾತ್ರೆ ಸೇವಿಸಿದ್ದರು. ಇದರಿಂದ ಓವರ್‌ ಡೋಸ್‌ ಆಗಿ ಸಾವು ಸಂಭವಿಸಿದೆ. ಡ್ರಗ್ಸ್‌ ಓವರ್‌ ಡೋಸ್‌ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಪೊಲೀಸರು, ಮೃತರಿಗೆ ಮಾತ್ರೆ ಪೂರೈಸಿದ್ದ ಆರೋಪಿಯನ್ನ ಬಂಧಿಸಲಾಗಿದೆ, ಆತನಿಂದ 6-7 ಮತ್ತೇರಿಸುವ ಮಾತ್ರೆಗಳನ್ನ ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!