Saturday, June 6, 2026
Homeಕರಾವಳಿಮಂಗಳೂರುಸುಳ್ಯ: ನೇವೋತ್ಸವದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ದೈವಧಾರಿ ಮೂಲಕ ಬೆದರಿಕೆ ಒಡ್ಡಿದ ಆರೋಪ; ಇಬ್ಬರ ವಿರುದ್ಧ...

ಸುಳ್ಯ: ನೇವೋತ್ಸವದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ದೈವಧಾರಿ ಮೂಲಕ ಬೆದರಿಕೆ ಒಡ್ಡಿದ ಆರೋಪ; ಇಬ್ಬರ ವಿರುದ್ಧ ಎಫ್‌ಐಆರ್ ಬೆಳ್ಳಾರೆ ಠಾಣೆಯಲ್ಲಿ ಎಫ್ ಐಆರ್

- Advertisement -
- Advertisement -

ಸುಳ್ಯ: ನೇವೋತ್ಸವದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ದೈವಧಾರಿ ಮೂಲಕ ಬೆದರಿಕೆ ಒಡ್ಡಿದ ಆರೋಪದಡಿ ಇಬ್ಬರ ವಿರುದ್ಧ ಎಫ್‌ಐಆರ್ ಬೆಳ್ಳಾರೆ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

 ಐವರ್ನಾಡು ಗ್ರಾಮದ ನಿವಾಸಿ ಮಮತಾ ಭಾಸ್ಕರ ಎಂಬುವವರು ನೀಡಿದ ದೂರಿನ ಮೇರೆಗೆ ದೈವಪಾತ್ರಿ ಮೋಹನ್ ಮತ್ತು ಸಚಿನ್ ಎಂಬುವವರ ವಿರುದ್ಧ ಕೇಸು ದಾಖಲಾಗಿದೆ. ಫೆಬ್ರವರಿ 24ರಂದು ನಡೆದ ಕುಟುಂಬದ ನೇಮೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಮಮತಾ ಎಂಬವರು ದೂರು ನೀಡಿದ್ದಾರೆ. ಮಮತಾ ಅವರ ಪತಿ ಭಾಸ್ಕರ ಮತ್ತು ಸಚಿನ್ ನಡುವೆ ಜಾಗದ ವಿವಾದವೊಂದು ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಸಿವಿಲ್ ಕೇಸನ್ನು ಹಿಂಪಡೆಯುವಂತೆ ಒತ್ತಡ ಹೇರಲು, ದೈವಧಾರಿಯ ಮೂಲಕ ಬೆದರಿಕೆ ಹಾಕಿಸಲಾಗಿದೆ ಎಂದು ಮಮತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಮಮತಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದರೂ ಸಹ, ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮಮತಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ಅಹವಾಲು ಆಲಿಸಿದ ಸುಳ್ಯ ನ್ಯಾಯಾಲಯವು, ಘಟನೆಯ ಗಾಂಭೀರ್ಯವನ್ನು ಪರಿಗಣಿಸಿ ಮಾರ್ಚ್ 26ರಂದು ಮಹತ್ವದ ಆದೇಶ ನೀಡಿತು. ತಕ್ಷಣವೇ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಬೆಳ್ಳಾರೆ ಪೊಲೀಸರು ಇದೀಗ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!