Wednesday, June 24, 2026
Homeಕರಾವಳಿಮಂಗಳೂರುಅಮ್ಮನ ಅಗಲಿಕೆಯ ನೋವಲ್ಲೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ...

ಅಮ್ಮನ ಅಗಲಿಕೆಯ ನೋವಲ್ಲೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಆಳ್ವಾಸ್ ಕಾಲೇಜಿನ ದಿಶಾ

- Advertisement -
- Advertisement -

ಮೂಡಬಿದಿರೆ: ದ್ವಿತೀಯ ಪಿಯುಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಹೀಗಿರುವಾಗ ಅಮ್ಮನ ಅಗಲಿಕೆಯ ನೋವಲ್ಲೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕ ಗಳಿಸಿ ಆಳ್ವಾಸ್ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿರುವ ಈಕೆಯ ಸಾಧನೆ ರಾಜ್ಯದ ಗಮನ ಸೆಳೆದಿದೆ.


ಮೂರು ಪರೀಕ್ಷೆಗಳು ಮುಗಿದ ಬೆನ್ನಲ್ಲೇ ದಿಶಾ ಅವರ ತಾಯಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು. “ಅಮ್ಮ ನಮ್ಮನ್ನು ಬಿಟ್ಟು ಹೋದಾಗ ಇಡೀ ಜಗತ್ತೇ ಕತ್ತಲಾದಂತಾಗಿತ್ತು. ಆದರೆ ಒಂದನ್ನು ಕಳೆದುಕೊಂಡಿದ್ದಾಯಿತು, ಅಮ್ಮನಿಗೆ ಇಷ್ಟವಾದ ಓದನ್ನಾದರೂ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ” ಎಂದು ದಿಶಾ ಭಾವುಕರಾಗಿದ್ದಾರೆ

ತಾಯಿಯನ್ನು ಕಳೆದುಕೊಂಡ ದಿಶಾಳಿಗೆ ಆಳ್ವಾಸ್ ಸಂಸ್ಥೆ ವಿಶೇಷ ಬೆಂಬಲ ನೀಡಿದೆ. “ಆಕೆಯನ್ನು ನಮ್ಮ ಸುಪರ್ದಿಯಲ್ಲೇ ಇರಿಸಿಕೊಂಡು, ಇಂಗ್ಲೀಷ್ ವಿಷಯದ ಭಯ ಹೋಗಲಾಡಿಸಿ ಪರೀಕ್ಷೆಗೆ ಸಿದ್ಧಪಡಿಸಿದೆವು” ಎಂದು ಡಾ. ಮೋಹನ್ ಆಳ್ವ ತಿಳಿಸಿದ್ದಾರೆ. ಸಿ.ಎ ಮಾಡುವ ಗುರಿ ಹೊಂದಿರುವ ದಿಶಾ, ಪ್ರಸ್ತುತ ಸಿ.ಎ ಫೌಂಡೇಷನ್ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.

- Advertisement -

Latest News

error: Content is protected !!