- Advertisement -
![]()
- Advertisement -
ಮುಂಬೈ: ಬೆಳ್ತಂಗಡಿ ತಾಲೂಕಿನ ಸವಣಾಲು ಸಾಲಿಗ್ರಾಮ ನಿಲಯ ನಿವಾಸಿ, ಮುಂಬೈ ಉದ್ಯಮಿ ರಾಮಕೃಷ್ಣ ವಿ ಶೆಟ್ಟಿ (61) ಇವರು ಅಲ್ಪ ಕಾಲದ ಅಸೌಖ್ಯದಿಂದ ಏಪ್ರಿಲ್ 4ರಂದು ನವಿ ಮುಂಬೈನಲ್ಲಿ ನಿಧನರಾದರು.
ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರು, ಕೊಡುಗೈ ದಾನಿ ಹಾಗೂ ಶಾಂತ ಸರಳ ಸ್ವಭಾವ ಹೊಂದಿದ್ದು ಜನಾನುರಾಗಿಯಾಗಿದ್ದರು.
ಮೂಲತಃ ಮಂಗಳೂರು ಬಜ್ಪೆ ಮುಂಡಾರು ಗುತ್ತು ಮನೆತನದವರಾದ ಇವರು ಹಿರಿಯ ಬಿಜೆಪಿ ಮುಖಂಡ ಸವಣಾಲು ಬಾಲಕೃಷ್ಣ ವಿ ಶೆಟ್ಟಿ ಅವರ ಹಿರಿಯ ಸಹೋದರ.
ಮೃತರು ಪತ್ನಿ ,ಪುತ್ರ, ಸಹೋದರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
- Advertisement -


