- Advertisement -
![]()
- Advertisement -
ಯಾದಗಿರಿ: ಊರಿಗೆ ತೆರಳಲು ಯಾವುದೇ ವಾಹನಗಳು ಸಿಗದ ಕಾರಣಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯದಿಂದ ವಜಾಗೊಂಡಿದ್ದ ಚಾಲಕನೋರ್ವ ಸರ್ಕಾರಿ ಬಸ್ ಕಳ್ಳತನ ಮಾಡಿ ಒಯ್ದಿರುವ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಮಾರ್ಚ್ 19 ರಂದು ಈ ಘಟನೆ ನಡೆದಿದ್ದು, ಸೈದಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಅನ್ನು
ಕೆಕೆಆರ್‌ಟಿಸಿಯ ಚಾಲಕ ಕಂ ನಿರ್ವಾಹಕನಾಗಿದ್ದ ಮಹಿಪಾಲ ರೆಡ್ಡಿ ಎಂಬಾತ ಕಳ್ಳತನ ಮಾಡಿದ್ದಾನೆ.
ಕರ್ತವ್ಯ ಲೋಪದ ಆರೋಪದ ಮೇರೆಗೆ ಮಹಿಪಾಲ ರೆಡ್ಡಿ ಸೇವೆಯಿಂದ ಹಿಂದೆಯೇ ವಜಾಗೊಂಡಿದ್ದು, ತನ್ನ ಊರಾದ ರಾಚನಳ್ಳಿಗೆ ಹೋಗಲು ಬಸ್ ಕಳ್ಳತನ ಮಾಡಿ ತೆಗೆದುಕೊಂಡು ಹೋಗಿ ಊರಿನ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದಾನೆ.ಚಾಲಕ ಮಹಿಪಾಲ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸೈದಾಪುರ ಠಾಣೆ ಪೊಲೀಸರು ಕಳ್ಳತನವಾಗಿದ್ದ ಬಸ್ಸನ್ನು ವಾಪಸ್ ತಂದಿದ್ದಾರೆ.
- Advertisement -


