ಉಡುಪಿ: ನೆಲ್ಯಾಡಿಯ ಯುವಕನೊಬ್ಬ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ನೆಲ್ಯಾಡಿ ಬಳಿಯ ಹೊಸಮಜಲು ನಿವಾಸಿ ಮಥಾಯಿ ಅವರ ಪುತ್ರ ಜಿನ್ಸನ್ ಪಿ ಎಂ (38) ಮೃತ ಯುವಕ.
ಜಿನ್ಸನ್ ಪಿ ಎಂ ಉಡುಪಿ ನಗರದ ಹಳೆ ಸರ್ಕಾರಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿನ್ಸನ್ ಅವರು ಮಂಗಳೂರಿನ ಬರ್ಕೆಯ ಕೋಸ್ಟಲ್ ಗಾರ್ಡ್ ನಲ್ಲಿ ಕೆಲಸ ಮಾಡುತ್ತಾ ಪತ್ನಿ ಹಾಗೂ ಮಕ್ಕಳೊಂದಿಗೆ ಅಲ್ಲೇ ವಾಸವಾಗಿದ್ದರು. ಮಾರ್ಚ್ 14 ರಂದು ಮಧ್ಯಾಹ್ನ ಮಂಗಳೂರಿನ ಮನೆಯಿಂದ ತೆರಳಿದ್ದ ಅವರು ತಾಯಿ ಹಾಗೂ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಹಾಗೇ ಹೋದವರು ಉಡುಪಿ ನಗರದ ಹಳೆ ಸರ್ಕಾರಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ನಲ್ಲಿ ರೂಂ ಪಡೆದಿದ್ದರು. ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ, ಮಾರ್ಚ್ 15 ರಂದು ರೂಂ ಬಾಯ್ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಜಿನ್ಸನ್ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಮನೆಯವರು ತಿಳಿಸಿದ್ದಾರೆ. ಮೃತರು ತಾಯಿ, ತಂದೆ, ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರನನ್ನು ಅಗಲಿದ್ದಾರೆ.


