Wednesday, June 3, 2026
Homeಕರಾವಳಿಮುಲ್ಕಿ ಪ್ರಜಾಸೌಧ ಲೋಕಾರ್ಪಣೆ; ಕಂದಾಯ ಸಚಿವ ಕೃಷ್ಣ ಭೈರೇಗೌಡರಿಂದ ಉದ್ಘಾಟನೆ

ಮುಲ್ಕಿ ಪ್ರಜಾಸೌಧ ಲೋಕಾರ್ಪಣೆ; ಕಂದಾಯ ಸಚಿವ ಕೃಷ್ಣ ಭೈರೇಗೌಡರಿಂದ ಉದ್ಘಾಟನೆ

- Advertisement -
- Advertisement -

ಮುಲ್ಕಿ: ಮುಲ್ಕಿ ತಾಲೂಕು ಪ್ರಜಾಸೌಧ ಇಂದು ಲೋಕಾರ್ಪಣೆಗೊಂಡಿದೆ. ಕಾರ್ನಾಡು ಗೇರುಕಟ್ಟೆ ಜಂಕ್ಷನ್ ನಲ್ಲಿ ನಿರ್ಮಾಣಗೊಂಡಿರುವ ನೂತನ ತಾಲೂಕು ಆಡಳಿತ ಸೌಧವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಇಂದು ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮಾಜಿ ಸಚಿವ ಅಭಯಚಂದ್ರ ಜೈನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಮ್ಮದು ಬೇರೆ ಪಕ್ಷ, ಕೃಷ್ಣ ಬೈರೇಗೌಡ ಅವರದ್ದು ಬೇರೆ ಪಕ್ಷ ಇರಬಹುದು. ಆದರೆ ಪ್ರತಿಭೆಗೆ ಮತ್ಸರ ಇಲ್ಲ. ಕಂದಾಯ ಇಲಾಖೆ ಬಗ್ಗೆ ಇವರಿಗೆ ಇರುವಷ್ಟು ಅನುಭವ ಯಾರಿಗೂ ಇಲ್ಲ. ಪ್ರಧಾನ ಕಾರ್ಯದರ್ಶಿಯವರಿಗೇ ಮಾರ್ಗದರ್ಶ ಮಾಡುವ ಮೂಲಕ ಅಸಾಧ್ಯವಾಗಿದ್ದ ಕೆಲಸವನ್ನು ಸಾಧ್ಯವಾಗಿಸಿದರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರ ಬಗ್ಗೆ ಮುಲ್ಕಿ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಸಮಾರಂಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಭೂ-ವಸತಿ ಹಕ್ಕುಪತ್ರಗಳನ್ನು ಸಚಿವರಾದ ಕೃಷ್ಣ ಭೈರೇಗೌಡ ಮತ್ತು ದಿನೇಶ್ ಗುಂಡೂರಾವ್ ವಿತರಿಸಿದರು.

- Advertisement -

Latest News

error: Content is protected !!