- Advertisement -
![]()
- Advertisement -
ಉಡುಪಿ: ನಿಯಂತ್ರಣ ತಪ್ಪಿ ಕೌಂಪಾಂಡ್ ಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ ತಾಯಿ ಸಾವನ್ನಪ್ಪಿ, ಮಗನಿಗೆ ಗಾಯಗಳಾಗಿರುವ ಘಟನೆ ಶುಕ್ರವಾರ ಸಂಜೆ ನಿಟ್ಟೂರು ಸಮೀಪ ನಡೆದಿದೆ.
ಉಡುಪಿ ಇಂಟಕ್ ಜಿಲ್ಲಾ ಕಾರ್ಯದರ್ಶಿ ಕಟಪಾಡಿ ಮೂಲದ ಹೆಲನ್ ಸೋನ್ಸ್ (50) ಮೃತರು. ಇವರ ಮಗ ಸವಾರ ಶರ್ವಿನ್ (20 ) ಗಾಯಗೊಂಡು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಯಿ ಮಗ ಹೋಗುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ನಿಟ್ಟೂರು ಬಬ್ಬು ಸ್ವಾಮಿ ದೈವಸ್ಥಾನದ ಕಾಂಪೌಂಡ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್ ಸಹ ಸವಾರೆ ಹೆಲೆನ್ ಸೋನ್ಸ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


