Saturday, June 13, 2026
Homeಕರಾವಳಿಉಡುಪಿಉಡುಪಿ: ಕುಸಿದು ಬಿದ್ದು ಯುವಕ ಸಾವು

ಉಡುಪಿ: ಕುಸಿದು ಬಿದ್ದು ಯುವಕ ಸಾವು

- Advertisement -
- Advertisement -

ಉಡುಪಿ: ಕುಸಿದು ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಹರ್ಕೂರು ಕಟ್ಟಿನಮಕ್ಕಿ ಪ್ರದೇಶದಲ್ಲಿ ನಡೆದಿದೆ. ಶಶಿಧರ ದೇವಾಡಿಗ (25) ಮೃತ ಯುವಕ.

ಶಶಿಧರ ದೇವಾಡಿಗ ಅವರು ಬಿಬಿಎ ವ್ಯಾಸಂಗ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ವರ್ಕ್ ಫ್ರಮ್ ಹೋಮ್ ಇದ್ದದ್ದರಿಂದ ಊರಿನಲ್ಲೇ ಇದ್ದರು.

ಮಾ.11ರಂದು ಸಂಜೆ ಮನೆಯ ಹಿಂದಿದ್ದ ಬಾತ್ ರೂಂಗೆ ಸ್ನಾನಕ್ಕೆ ತೆರಳುವಾಗ ಹಠಾತ್ ಕುಸಿದು ಬಿದ್ದಿದ್ದು, ಎದೆನೋವಿನಿಂದ ನರಳಾಡಿದರು ಎನ್ನಲಾಗಿದೆ. ಬಳಿಕ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ರಾತ್ರಿ ವೇಳೆ ಮೃತಪಟ್ಟಿದ್ದಾರೆ.ಈ ಬಗ್ಗೆ ಮೃತರ ತಂದೆ ಸದಾಶಿವ ಕೆ. ಉಳ್ಳೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!