Saturday, August 22, 2026
Homeಕರಾವಳಿಉಡುಪಿಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್

- Advertisement -
- Advertisement -

ಉಡುಪಿ: ಕೊಲ್ಲೂರಿಗೆ ಇಂದು ಭೇಟಿ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ್ದಾರೆ.

ಸುಮಾರು ಅರ್ಧ ಗಂಟೆಗಳ ಕಾಲ ಮೂಕಾಂಬಿಕಾ ದೇವಸ್ಥಾನದಲ್ಲಿ ಇದ್ದ ವಿಜಯ್ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಹಿಂತಿರುಗಿದ್ದಾರೆ.

ವಾಪಸಾಗುವ ವೇಳೆ ಕಾರು ಹತ್ತುವ ಮುನ್ನ ಅಭಿಮಾನಿಗಳತ್ತ ತೆರಳಿ ಕೈ ಬೀಸಿ ಮಂಗಳೂರಿಗೆ ವಾಪಸಾದರು. ಮಂಗಳೂರಿನಿಂದ ವಿಶೇಷ ವಿಮಾನದ ಮೂಲಕ ವಿಜಯ್ ಚೆನ್ನೈಗೆ ತೆರಳಿದ್ದಾರೆ.

ಈ ಹಿಂದೆ ಕೊಲ್ಲೂರಿಗೆ ಭೇಟಿ ನೀಡಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್, ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗ ನೀಡಿದ್ದರು. ಇಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ವಿಜಯ್ ಚಿನ್ನದ ಖಡ್ಗವನ್ನೂ ವೀಕ್ಷಿಸಿದ್ದಾರೆ.

ಇಂದು ಜೋಸೆಫ್ ವಿಜಯ್ ಸಮರ್ಪಿಸಿದ ಬೆಳ್ಳಿಯ ಖಡ್ಗವನ್ನು ಕಲ್ಯಾಣ್ ಜ್ಯುವೆಲ್ಲರ್ಸ್ ತಯಾರಿಸಿದೆ

- Advertisement -

Latest News

error: Content is protected !!