Friday, August 21, 2026
Homeಕರಾವಳಿಮಂಗಳೂರುಪುತ್ತೂರು: ಜೆರಾಕ್ಸ್ ನೀಡಿದ ದಾಖಲೆ ಸುಟ್ಟ ವಿಚಾರಕ್ಕೆ ಗಲಾಟೆ: ದೂರು, ಪ್ರತಿ ದೂರು ದಾಖಲು

ಪುತ್ತೂರು: ಜೆರಾಕ್ಸ್ ನೀಡಿದ ದಾಖಲೆ ಸುಟ್ಟ ವಿಚಾರಕ್ಕೆ ಗಲಾಟೆ: ದೂರು, ಪ್ರತಿ ದೂರು ದಾಖಲು

- Advertisement -
- Advertisement -

ಪುತ್ತೂರು: ದಾಖಲೆ ಪತ್ರವೊಂದು ಲ್ಯಾಮಿನೇಷನ್ ಮಾಡುವಾಗ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ಗಲಾಟೆ ನಡೆದು, ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ದಿನಾಂಕ 21.08.2026ರಂದು ಮಧ್ಯಾಹ್ನ ಪುತ್ತೂರಿನ ದರ್ಭೆಯಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬುವವರು ದರ್ಭೆಯಲ್ಲಿರುವ ಅಂಜನಾ ಪೈ ಅವರ “Dream destination digital seva Kendra” ಅಂಗಡಿಗೆ ದಾಖಲೆಗಳ ಜರಾಕ್ಸ್ ಹಾಗೂ ಲ್ಯಾಮಿನೇಷನ್ ಮಾಡಲು ನೀಡಿದ್ದರು. ಈ ವೇಳೆ ತಾಂತ್ರಿಕ ದೋಷದಿಂದಾಗಿ ಒಂದು ದಾಖಲೆ ಸುಟ್ಟುಹೋಗಿದ್ದು, ಈ ವಿಚಾರವಾಗಿ ಗ್ರಾಹಕರು ಹಾಗೂ ಅಂಗಡಿಯ ಅಂಜನಾ ಪೈ ಮತ್ತು ಅವರ ಮಗ ಸುದರ್ಶನ್ ಪೈ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಸ್ಥಳದಲ್ಲಿ ಜನರು ಗುಂಪುಗೂಡಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆದೊಯ್ಯುವಾಗ ಅಲ್ಲಿದ್ದ ಕೆಲವರು ಪೊಲೀಸರ ಕರ್ತವ್ಯಕ್ಕೆ ತಡೆಯೊಡ್ಡಿದರೆನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ದೂರು ಹಾಗೂ ಪ್ರತಿ ದೂರು ದಾಖಲಾಗುತ್ತಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!