ಬೆಂಗಳೂರು : 17ನೇ ಆಯವ್ಯಯ ಮಂಡಿಸುವ ಮೂಲಕ ಮಾ.6 ಶುಕ್ರವಾರದಂದು ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ದಾಖಲೆಯಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ನಮ್ಮ ಮೆಟ್ರೊದಲ್ಲಿ 95 ಕಿ.ಮಿ ಗೆ 67.460 ಕೋಟಿ ರೂ. ಖರ್ಚು, ಕ್ರೈಸ್ಟ್ ಶಾಲೆಯ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ 50 ಕೋಟಿ ರೂ. ನಿಗದಿ, ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರೋ 11 ಸಮುದಾಯಗಳ ವಸತಿರಹಿತ 6,257 ಕುಟುಂಬಗಳಿಗೆ 4.50 ಲಕ್ಷ ವೆಚ್ಚದಲ್ಲಿ282 ಮನೆ ನಿರ್ಮಾಣ, 300 ಮೌಲಾನಾ ಆಝಾದ್ ಶಾಲೆಗಳಲ್ಲಿ 13.30 ಲಕ್ಷ ಮಕ್ಕಳ ಶಿಕ್ಷಣಕ್ಕೆ 15.081 ಕೋಟಿ ನೆರವು, 75 ಲಕ್ಷ ವಿದ್ಯಾರ್ಥಿಗಳಿಗೆ 2.676 ಕೋಟಿ ವಿದ್ಯಾರ್ಥಿ ವೇತನ, 2.231 ವಿದ್ಯಾರ್ಥಿಗಳಿಗೆ 389 ಕೋಟಿ ಶೈಕ್ಷಣಿಕ ಸಾಲ, ಪ್ರತಿ ಜಿಲ್ಲೆಯಲ್ಲಿ ʼಅಕ್ಕಪಡೆ ನಿಯೋಜನೆʼ, ರಾಜ್ಯದ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿಗೆ 200 ಕೋಟಿ ರೂ, ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲೆಯ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸೇರಿದಂತೆ ಅನೇಕ ಯೋಜನೆಗಳನ್ನು ಮಾಡಲಾಗಿದೆ.
ರಾಜ್ಯ ಬಜೆಟ್ ಕ್ಷೇತ್ರವಾರು ಹಂಚಿಕೆ
ಪಶುಸಂಗೋಪನೆ-4084, ಕೋಟಿಕೃಷಿ ಮತ್ತು ತೋಟಗಾರಿಕೆ-8373 ಕೋಟಿ, ಆಹಾರ,ನಾಗರೀಕ ಸರಬರಾಜು-7942 ಕೋಟಿ, ಲೊಕೋಪಯೋಗಿ -11424 ಕೋಟಿ,
ಸಮಜಕಲ್ಯಾಣ ಇಲಾಖೆ-18612 ಕೋಟಿ, ಕಂದಾಯ ಇಲಾಖೆ- 19845 ಕೋಟಿ, ಆರೋಗ್ಯ ಕುಟುಂಬ ಕಲ್ಯಾಣ – 17818 ಕೋಟಿ, ಶಿಕ್ಚಣ ಇಲಾಖೆ- 47224 ಕೋಟಿ,
ಮಹಿಳಾ ಮಕ್ಕಳ ಕಲ್ಯಾಣ -34929ಕೋಟಿ, ಇಂಧನ ಇಲಾಖೆ-29947 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆ-26559 ಕೋಟಿ, ನೀರಾವರಿ- 22436 ಕೋಟಿ,
ನಗರಾಭಿವೃದ್ಧಿ, ವಸತಿ ಇಲಾಖೆ- 22203 ಕೋಟಿ, ಒಳಾಡಳಿತ ಬಂದರು- 23100 ಕೋಟಿ, ಇತರೆ ವೆಚ್ಚ- 172757 ಕೋಟಿ ಹಂಚಿಕೆ ಮಾಡಲಾಗಿದೆ.


