Saturday, June 6, 2026
Homeಕರಾವಳಿಮಂಗಳೂರುರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಂಗಳೂರಿಗೆ ಭೇಟಿ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಂಗಳೂರಿಗೆ ಭೇಟಿ

- Advertisement -
- Advertisement -

ಮಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಇಂದು ಮಂಗಳೂರಿಗೆ ಭೇಟಿ ನೀಡಿದರು. ಬಲ್ಮಠದಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಭೇಟಿ ನೀಡಿದ್ದ ನಾಗಲಕ್ಷ್ಮಿ ಚೌಧರಿ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದರು.

ಸಂವಾದದ ಬಳಿಕ ಮಾಧ್ಯಮ ಪ್ರತಿಕ್ರಿಯೆ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಅನೇಕ ಕಾರಣಗಳಿದ್ದು, ಸ್ಮಾರ್ಟ್ ಫೋನ್ ಗಳಲ್ಲಿ ಬಹಳಷ್ಟು ‌ಅಶ್ಲೀಲ ವೀಡಿಯೋಗಳು ಬರುತ್ತಿವೆ,ಡ್ರಗ್ಸ್ ಮತ್ತು ಲಿಕ್ಕರ್ ಎಲ್ಲವೂ ಸುಲಭವಾಗಿ ಸಿಗುತ್ತಿವೆ, ಹೀಗಾಗಿ ಈ‌ ಎಲ್ಲಾ ಕಾರಣಗಳಿಂದ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ನಾಗಲಕ್ಷ್ಮೀ ಚೌಧರಿ, ಪ್ರಕರಣ ಸಂಬಂಧ ಎಸ್ಐಟಿ ನಮಗೆ ಇನ್ನಷ್ಟೇ ವರದಿ ನೀಡಬೇಕಾಗಿದೆ, ತನಿಖೆ ಮುಗಿಯುವವರೆಗೂ ಕಾಯಬೇಕಾಗಿದೆ ಎಂದಿದ್ದಾರೆ.

ಇನ್ನು, ಪುತ್ತೂರಿನಲ್ಲಿ ನಡೆದ ಬಿಜೆಪಿ ಮುಖಂಡನ ಪುತ್ರ ಲವ್ ಸೆಕ್ಸ್ ದೋಖಾ‌ ಪ್ರಕರಣದಲ್ಲಿ ಎಸ್ಪಿ ಮತ್ತು ಸಂತ್ರಸ್ಥೆ ಜೊತೆ ಮಾತನಾಡಿದ್ದೇನೆ ಎಂದು ಹೇಳಿರುವ ಡಾ. ಚೌಧರಿ, ಸಂತ್ರಸ್ಥೆ ಮನೆಗೂ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!