- Advertisement -
![]()
- Advertisement -
ಕಡಬ: ಕಾನೂನು ಬಾಹಿರವಾಗಿ ಆನೆ ದಂತ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡಬದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಡಬ ಪೇಟೆಯಲ್ಲಿ ಮಟನ್ ಸ್ಟಾಲ್ ನಡೆಸುತ್ತಿದ್ದ ತಾಜು ಬಂಧಿತ ಆರೋಪಿ.
ಈತ ಆನೆದಂತಗಳನ್ನು ತಂದು ಹಣಕ್ಕಾಗಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಸೋಮವಾರ ಮಧ್ಯಾಹ್ನ ಕಡಬಕ್ಕೆ ಆಗಮಿಸಿದ ಮಂಗಳೂರಿನ ಪೊಲೀಸ್ ಅರಣ್ಯ ಸಂಚಾರಿ ದಳದ ತಂಡವು ಕಾರ್ಯಾಚರಣೆ ನಡೆಸಿತು. ಆರೋಪಿಯನ್ನು ದಂತಗಳ ಸಮೇತ ವಶಕ್ಕೆ ಪಡೆಯಲಾಗಿದೆ,ಆನೆ ದಂತದ ತೂಕ ಅಂದಾಜು 26 ಕೆ.ಜೆ ಎಂದು ಹೇಳಲಾಗುತ್ತಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇನ್ನು ಕೆಲವರ ಬಂಧನ ಸಾಧ್ಯತೆ ಇದ್ದು ತನಿಖೆ ಮುಂದುವರಿದಿದೆ.
- Advertisement -


