- Advertisement -
![]()
- Advertisement -
ಬೆಳ್ತಂಗಡಿ: ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ, ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಾಜಿ ಅಧ್ಯಕ್ಷ,ಬೆಳ್ತಂಗಡಿ ಬಂಟರ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಅಂಚೆ ಪಾಲಕ ಮತ್ತು ಯಕ್ಷಗಾನ ಅರ್ಥಧಾರಿಯಾಗಿದ್ದ ಲ.ಬಿ ರಘುರಾಮ ಗಾಂಭೀರ ಅವರು ಅಲ್ಪಕಾಲದ ಅಸೌಖ್ಯದಿಂದ ಮಾ. 5 ಗುರುವಾರದಂದು ನಿಧನರಾಗಿದ್ದಾರೆ.
ಸವಣಾಲು ಬೊಳ್ಳೊಟ್ಟು ಗುತ್ತು ನಿವಾಸಿ, ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಬಂಟ ಮನೆತನ ಅನಂತಾಡಿ ಬಾಳಿಕೆಯವರಾದ ರಘುರಾಮ ಗಾಂಭೀರ ಅವರು ಲಯನ್ಸ್ ಕ್ಲಬ್ ನಲ್ಲಿ ಸುಮಾರು 46 ವರ್ಷಗಳ ಕಾಲ ಸದಸ್ಯರಾಗಿ ಸೇವೆ, ಹಾಗೂ ಊರಿನ ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು ಮತ್ತು ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸಿದ್ದರು.
ಮೃತರು ಪತ್ನಿ, ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ
- Advertisement -


