Saturday, June 6, 2026
Homeಕರಾವಳಿಮಂಗಳೂರುಪುತ್ತೂರು; ಅಂಗಿಂಜದ ಅಂಗಿತ್ತಾಯ ಕುಟುಂಬದ ಹಿರಿಯರಾದ ಗೋಪಾಲಕೃಷ್ಣ ಅಂಗಿತ್ತಾಯ ನಿಧನ

ಪುತ್ತೂರು; ಅಂಗಿಂಜದ ಅಂಗಿತ್ತಾಯ ಕುಟುಂಬದ ಹಿರಿಯರಾದ ಗೋಪಾಲಕೃಷ್ಣ ಅಂಗಿತ್ತಾಯ ನಿಧನ

- Advertisement -
- Advertisement -

ಪುತ್ತೂರು ಅಂಗಿಂಜದ ಅಂಗಿತ್ತಾಯ ಕುಟುಂಬದ ಹಿರಿಯರಾದ ಶ್ರೀ ಗೋಪಾಲಕೃಷ್ಣ ಅಂಗಿತ್ತಾಯರು (92) ಇಂದು ಬೆಳಗ್ಗೆ ನಿಧನರಾದರು.

ಪುತ್ತೂರು ಆಸುಪಾಸಿನಲ್ಲಿ ಪಾಕಶಾಸ್ತ್ರ ಪ್ರವೀಣರಾಗಿ ಎಲ್ಲರ ಅಚ್ಚುಮೆಚ್ಚಿನ “ಗೋಪಣ್ಣ” ಎಂದೇ ಪ್ರಸಿದ್ಧರಾಗಿದ್ದ ಅವರು, ಅನೇಕ ದೇವಸ್ಥಾನಗಳ ಜಾತ್ರಾ ಮಹೋತ್ಸವಗಳಲ್ಲಿ ಅಡುಗೆ ಮಾಡಿ ಭಕ್ತರ ಮನ ಗೆದ್ದಿದ್ದರು. ಅಂಗಿತ್ತಾಯರ ಮಜ್ಜಿಗೆ ಹುಳಿ, ಮೆಣಸ್ಕಾಯಿ ಖಾದ್ಯ ಮತ್ತು ಕಡ್ಲೆಬೇಳೆ ಹೋಳಿಗೆಗೆ ನೀಡಿದ ಹೊಸ ರೂಪ ವಿಶೇಷ ಖ್ಯಾತಿ ಪಡೆದಿತ್ತು.

ಮೃತರು ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪವಿತ್ರ ಪಾಣಿ ಆಗಿಯಾಗಿದ್ದರು.ಪ್ರಾಯೋದ್ಧಾರ ಬಳಿಕವೂ ಅವರ ಸಂಪ್ರದಾಯವನ್ನು ಮಕ್ಕಳು ಮುಂದುವರಿಸಿಕೊಂಡು ಬಂದಿದ್ದಾರೆ.ಮೃತರು ಇಬ್ಬರು ಪುತ್ರರಾದ ಉದಯ ಅಂಗಿತ್ತಾಯ ಮತ್ತು ವಿಷ್ಣು ಅಂಗಿತ್ತಾಯ ಹಾಗೂ ಇಬ್ಬರು ಪುತ್ರಿಯರಾದ ಗೀತಾ ಮತ್ತು ಲತಾ ಅವರನ್ನು ಅಗಲಿದ್ದಾರೆ.

ಕುಟುಂಬಸ್ಥರು ಹಾಗೂ ಅಪಾರ ಬಂಧುಬಳಗಕ್ಕೆ ಅವರ ನಿಧನವು ಅಪಾರ ನಷ್ಟ ಉಂಟುಮಾಡಿದೆ.

- Advertisement -

Latest News

error: Content is protected !!