ಹುಬ್ಬಳ್ಳಿ: ಇತಿಹಾಸದಲ್ಲೇ ಮೊದಲ ಬಾರಿಗೆ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡ ರಣಜಿ ಕಪ್ ಚಾಂಪಿಯನ್ ಆಗಿದೆ.
ಹುಬ್ಬಳ್ಳಿಯ ಕೆಎಸ್ ಸಿಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಎದುರು ಪರಾಸ್ ಡೋಗ್ರಾ ನೇತೃತ್ವದ ಜಮ್ಮು ಕಾಶ್ಮಿರ ತಂಡ ಗೆಲುವು ಸಾಧಿಸಿದೆ.
ಪೈನಲ್ ಪಂದ್ಯ ಡ್ರಾ ದಲ್ಲಿ ಅಂತ್ಯವಾಗಿದ್ದು,ಮೊದಲ ಇನ್ನಿಂಗ್ಸ್ ಮುನ್ನಡೆಯಲ್ಲಿ ಜಮ್ಮು ಕಾಶ್ಮಿರ ತಂಡ ಗೆಲುವು ಸಾಧಿಸಿದೆ. ಜಮ್ಮುಕಾಶ್ಮಿರ ಮೊದಲ ಇನ್ನಿಂಗ್ಸ್ ನಲ್ಲಿ 584 ರನ್ ಗಳಿಸಿ ಆಲೌಟ್ ಆಗಿದ್ದರೆ,
ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 293 ರನ್ ಗೆ ಆಲೌಟ್ ಆಗಿತ್ತು. ದ್ವಿತೀಯ ಇನ್ಸಿಂಗ್ಸ್ ನಲ್ಲಿ ಜಮ್ಮು ಕಾಶ್ಮಿರ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿತ್ತು. ಒಟ್ಚು 632 ರನ್ ಗಳ ಮುನ್ನಡೆ ಪಡೆದಿದ್ದ ಜಮ್ಮು ಕಾಶ್ಮಿರ ತಂಡ ವಿಜಯಿಯಾಗಿದೆ.
ತಮ್ಮ ರಾಜ್ಯದ ತಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲೇ ಇದ್ದು ಪಂದ್ಯ ವೀಕ್ಷಿಸಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮೈದಾನಕ್ಕೆ ಇಳಿದು ಸಂಭ್ರಮಿಸಿದರು.


