Tuesday, June 23, 2026
HomeUncategorizedಮಹಾರಾಷ್ಟ್ರದ ರತ್ನಗಿರಿಯಲ್ಲಿ ಭೀಕರ ರಸ್ತೆ ಅಪಘಾತ: ಲಾರಿ ಚಾಲಕ ಮುಡಿಪು ನಿವಾಸಿ ಮಹಮ್ಮದ್ ರಿಜ್ವಾನ್ ಮೃತ್ಯು

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಭೀಕರ ರಸ್ತೆ ಅಪಘಾತ: ಲಾರಿ ಚಾಲಕ ಮುಡಿಪು ನಿವಾಸಿ ಮಹಮ್ಮದ್ ರಿಜ್ವಾನ್ ಮೃತ್ಯು

- Advertisement -
- Advertisement -

ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ ಮುಡಿಪು ನಿವಾಸಿ ಮಹಮ್ಮದ್ ರಿಜ್ವಾನ್(28) ಅವರು ಮೃತಪಟ್ಟಿದ್ದಾರೆ.

ಬೋಳಿಯಾರ್ ನಿವಾಸಿ ಬಿ.ಹೆಚ್.ಕರೀಂ ಪುತ್ರ ಮಹಮ್ಮದ್ ರಿಜ್ವಾನ್ ಮೃತಪಟ್ಟವರು. ಕಳೆದ ಕೆಲವು ವರ್ಷಗಳಿಂದ ಮಂಗಳೂರು-ಮಹಾರಾಷ್ಟ್ರ ಮಧ್ಯೆ ಸಂಚರಿಸುವ ಮೀನಿನ ಲಾರಿಯಲ್ಲಿ ರಿಜ್ವಾನ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು .

ರತ್ನಗಿರಿ ಎಂಬಲ್ಲಿ ಎರಡು ಲಾರಿಗಳ ಮಧ್ಯೆ ನಡೆದ ಭೀಕರ ಮುಖಾಮುಖಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಚಾಲಕ ರಿಜ್ವಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ರಿಜ್ವಾನ್ ವಿವಾಹಿತರಾಗಿದ್ದು ತಂದೆ, ತಾಯಿ, ಪತ್ನಿ, ಎರಡು ವರ್ಷದ ಪುಟ್ಟ ಮಗು, ಮೂವರು ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ.

ಬುಧವಾರ ಬೆಳಗ್ಗೆ ಮೃತದೇಹವು ಬೋಳಿಯಾರ್ ತಲುಪಲಿದ್ದು ಇಲ್ಲಿನ ಕೇಂದ್ರ ಮಸೀದಿಯ ವಠಾರದಲ್ಲಿ ಅಂತ್ಯಕ್ರಿಯೆ ನಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!