Tuesday, July 7, 2026
Homeಕರಾವಳಿದಕ್ಷಿಣಕನ್ನಡ ಜಿಲ್ಲೆಯ ಹಲೆವೆಡೆ ಅಕಾಲಿಕ ದರ್ಶನ ಕೊಟ್ಟ ವರುಣ

ದಕ್ಷಿಣಕನ್ನಡ ಜಿಲ್ಲೆಯ ಹಲೆವೆಡೆ ಅಕಾಲಿಕ ದರ್ಶನ ಕೊಟ್ಟ ವರುಣ

- Advertisement -
- Advertisement -

ದಕ್ಷಿಣಕನ್ನಡ ಜಿಲ್ಲೆಯ ಹಲೆವೆಡೆ ನಿನ್ನೆ ವರುಣ ಅಕಾಲಿಕ ದರ್ಶನ ಕೊಟ್ಟಿದ್ದಾನೆ. ಬುಧವಾರ ಸಂಜೆ ಹಲವೆಡೆ ದಿಢೀರ್ ಮಳೆ ಬಂದಿದ್ದು ಅಂಗಳದಲ್ಲಿ ಅಡಿಕೆ ಹಾಕಿದ್ದ ಕೃಷಿಕರು ಕಂಗಾಲಾಗಿದ್ದಾರೆ.

ಸುಳ್ಯ, ಪುತ್ತೂರು ಸುತ್ತಮುತ್ತಲಿನ ಭಾಗದಲ್ಲಿ ಸಂಜೆ ಮಳೆಯಾಗಿದೆ. ಸಂಪಾಜೆ, ಕಬಕ, ವಿಟ್ಲ, ಬೆಟ್ಟಂಪಾಡಿ, ರೆಂಜ, ನಿಡ್ಪಳ್ಳಿ, ಕೊಂದಲಕಾನ ಸೇರಿದಂತೆ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ವಿಟ್ಲ ಸುತ್ತಮುತ್ತ ಬುಧವಾರ ಮಧ್ಯಾಹ್ನ ಹತ್ತು ನಿಮಿಷ ಉತ್ತಮ ಮಳೆ ಸುರಿದಿದೆ. ವಿಟ್ಲ ಪೇಟೆ, ಉಕ್ಕುಡ, ಪುಣಚ, ಬುಳೇರಿಕಟ್ಟೆ ಮತ್ತಿತರ ಕಡೆಗಳಲ್ಲಿ ಮಳೆ ಸುರಿದಿದೆ.

- Advertisement -

Latest News

error: Content is protected !!