Wednesday, June 24, 2026
HomeUncategorizedರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ ಅರೆಸ್ಟ್

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ ಅರೆಸ್ಟ್

- Advertisement -
- Advertisement -

ಬೆಂಗಳೂರು; ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್‌ ಅವರನ್ನು ಅರೆಸ್ಟ್ ಮಾಡಲಾಗಿದೆ.

ಇಂಡಿಗೋ ವಿಮಾನದಲ್ಲಿ ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ ಬಸವರಾಜ್‌ ಅವರನ್ನು ವಿಮಾನ ನಿಲ್ದಾಣದ ಟರ್ಮಿನಲ್‌ 1 ರಲ್ಲಿ ಬಂಧಿಸಲಾಗಿದೆ.

ವಿಮಾನದಲ್ಲಿ ಬರುತ್ತಿರುವ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬಸವರಾಜ್‌ ಬರುತ್ತಿದ್ದಂತೆ ಎಸಿಪಿ ಹರ್ಷ ಅವರು ವಶಕ್ಕೆ ಪಡೆದರು.

ವಿಮಾನ ನಿಲ್ದಾಣದಲ್ಲಿ ಗುರುತು ಪತ್ತೆಯಾಗದಂತೆ ಬಸವರಾಜ್ ಮುಖಕ್ಕೆ ಸಫಾರಿ ಮಾಸ್ಕ್‌ ಧರಿಸಿದ್ದರು. ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಬೈರತಿ ಬಸವರಾಜ್‌ಗೆ ಅಲ್ಲಿಯೂ ಹಿನ್ನಡೆಯಾಗಿತ್ತು.. ಬೈರತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

- Advertisement -

Latest News

error: Content is protected !!