
ಕಡಬ: ಕೋಮು ಪ್ರಚೋದನಾಕಾರಿ ಪೋಸ್ಟ್ ಹಾಕಿದ ಕಡಬ ಮೂಲದ ಯುವಕ ಹಾಗೂ ಬಂಟ್ವಾಳದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಗುಂಡ್ಯ ಸಿರಿಬಾಗಿಲು ನಿವಾಸಿ ಹಿತೇಶ್ ಎ ಹಾಗೂ ಬಂಟ್ವಾಳ ತಾಲೂಕಿನ ನಿತೇಶ್ ಕೆ ಬಂಧಿತರು.
ಆರೋಪಿಗಳು ಕಾರ್ಕಳ ಮೂಲದ ವಿವಾಹಿತ ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕನೋರ್ವನ ವಿಚಾರವಾಗಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಲ್ಲದೆ, ಕೋಮುಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಾಕಿದ್ದರು ಎನ್ನಲಾಗಿಗೆ.
ಏನಿದು ಪ್ರಕರಣ?:
ಆರೋಪಿಗಳು 2025ರ ಮೇ 16 ರಂದು ಇನ್‌ಸ್ಟಾಗ್ರಾಂನಲ್ಲಿ ಈ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಈ ಕುರಿತು ʼಮೆಟಾಡಾಟಾʼ ಬಳಸಿ ಆರೋಪಿಗಳ ಮಾಹಿತಿಯನ್ನು ಸಂಗ್ರಹನೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ಪ್ರಚೋದನಾಕಾರಿ ಪೋಸ್ಟ್ ಕುರಿತು ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.
ಫೆ.1 ರಂದು ಮಂಗಳೂರಿನ ಲಾಲ್‌ಭಾಗ್ ಬಳಿ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಮೊಬೈಲ್‌ಫೋನ್‌ಗಳನ್ನು ವಶಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.


