ಉಡುಪಿ: ಕಾಪು ತಾಲೂಕಿನ ಶಿರ್ವ ಸಮೀಪದ ಧೂಮಾವತಿ ದೈವ ಸನ್ನಿಧಿಯಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಚಿವರು ಆಪ್ತ ಜೀವನ್ ಶೆಟ್ಟಿ ಅವರು ಇಲ್ಲಿಗೆ ಬರುವಂತೆ ಕರೆದಿದ್ದರು ನಾನು ಬಂದಿದ್ದೇನೆ. ಕುಟುಂಬದ ಜೊತೆಗೆ ಬಂದು ದೈವದ ಆಶೀರ್ವಾದ ಪಡೆದಿದ್ದೇನೆ. ದೈವಸ್ಥಾನದ ಕಟ್ಟಡಕ್ಕೆ ಸಹಕಾರ ಮಾಡಿದವರನ್ನು ಸನ್ಮಾನಿಸಿದ್ದೇನೆ. ಇಂತಹ ದೈವದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಮಾನಸಿಕ ನೆಮ್ಮದಿ ಎಲ್ಲರ ಬದುಕು ಚೆನ್ನಾಗಿರಬೇಕು.ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸಿಎಂ ಸ್ಥಾನ ವಿವಾದ ಬಗ್ಗೆ ಮಾತನಾಡಿದ ತಿಮ್ಮಾಪುರ ನಮ್ಮಲ್ಲಿ ಹೈಕಮಾಂಡ್ ನಿರ್ಧಾರವೇ ಸುಪ್ರೀಂ. ನಾನೊಂದು ಹೇಳ್ತೀನಿ ನೀವೊಂದು ಹೇಳ್ತೀರಿ ಅಂದ್ರೆ ಆಗಲ್ಲ. ಹೈಕಮಾಂಡ್ ಹೇಳಿದ ಹಾಗೆ ಆಗುತ್ತೆ ಎಂದ ಅವರು ಅಬಕಾರಿ ಹಗರಣದ ಬಗ್ಗೆ ಮಾತನಾಡಿ ಬಿಜೆಪಿ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು. ಆರೋಪಗಳೆಲ್ಲ ಬೋಗಸ್. ಸದನದಲ್ಲಿ ಎಲ್ಲಾ ವಿಚಾರ ಹೇಳಿದ್ದೇನೆ ಎಂದಿದ್ದಾರೆ.


