Saturday, June 6, 2026
Homeಕರಾವಳಿಉಡುಪಿಉಡುಪಿ ಉಪ್ಪೂರು ಕೆ.‌ಜಿ ರೋಡ್ ಬಳಿ ಟ್ರಕ್ ನಡಿ ಸಿಲುಕಿ ಬೈಕ್ ಸವಾರ ಸಾವು

ಉಡುಪಿ ಉಪ್ಪೂರು ಕೆ.‌ಜಿ ರೋಡ್ ಬಳಿ ಟ್ರಕ್ ನಡಿ ಸಿಲುಕಿ ಬೈಕ್ ಸವಾರ ಸಾವು

- Advertisement -
- Advertisement -

ಉಡುಪಿ ಉಪ್ಪೂರು ಕೆ.‌ಜಿ ರೋಡ್ ಬಳಿಟ್ರಕ್ ನಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

14  ಚಕ್ರಗಳ ಟ್ರಕ್ಕಿನ ಚಕ್ರದಡಿ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತ ಸವಾರ‌ ಬ್ರಹ್ಮವಾರ ಮಟಪಾಡಿಯ ನಿವಾಸಿ ಎನ್ನಲಾಗಿದೆ. ಚಕ್ರದಡಿ ಸಿಲುಕಿದ ಬೈಕ್ ಸವಾರನ ದೇಹವು ಛಿದ್ರಗೊಂಡಿದ್ದು, ದೇಹದಿಂದ ರುಂಡ ಬೆರ್ಪಟ್ಟು ಚಕ್ರದಡಿ ಸಿಲುಕಿಕೊಂಡಿರುವ ಭೀಕರ ದೃಶ್ಯವು ಮನಕಲಕುವಂತಿತ್ತು. 

ಘಟನಾ ಸ್ಥಳಕ್ಕೆ ಬಂದು ಬ್ರಹ್ಮಾವರ ಆರಕ್ಷಕ ಠಾಣೆಯ‌ ಮುಖ್ಯ ಆರಕ್ಷಕ ಮಹಾಲಿಂಗ ಮಹಜರು ಪ್ರಕ್ರಿಯೆ ನಡೆಸಿದರು. ಶವತೆರವು ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು,‌ ಮತ್ತು ಬ್ರಹ್ಮಾವರದ ಅಂಬುಲೆನ್ಸ್ ಚಾಲಕ ನೆರವಾದರು.

- Advertisement -

Latest News

error: Content is protected !!