Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪುತ್ರಬೈಲಿ‌ನಲ್ಲಿ ಸರಕಾರದ ಕುಡಿಯುವ ನೀರಿನ ಬಾವಿ ಕಲುಷಿತಗೊಳಿಸಿ ಜಾಗ ಒತ್ತುವರಿ

ಬೆಳ್ತಂಗಡಿ : ಪುತ್ರಬೈಲಿ‌ನಲ್ಲಿ ಸರಕಾರದ ಕುಡಿಯುವ ನೀರಿನ ಬಾವಿ ಕಲುಷಿತಗೊಳಿಸಿ ಜಾಗ ಒತ್ತುವರಿ

- Advertisement -
- Advertisement -

ಬೆಳ್ತಂಗಡಿ : ಸರಕಾರ ಸಾರ್ವಜನಿಕರಿಗಾಗಿ  ಕುಡಿಯುವ ನೀರಿನ ಬಾವಿಯನ್ನು ನಿರ್ಮಾಣ ಮಾಡಿರುವುದನ್ನು ಸ್ಥಳೀಯ ನಿವಾಸಿ ಸರಕಾರಿ ಜಾಗವನ್ನು ಸಮೇತ ಒತ್ತುವರಿ ಮಾಡಿಕೊಂಡಿದ್ದರೂ ಗ್ರಾಮ ಪಂಚಾಯತ್ ಮಾತ್ರ ಮೌನವಹಿಸಿರುವ ಬಗ್ಗೆ ಗ್ರಾಮಸ್ಥರೊಬ್ಬರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ಬಳಿಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಸಾರ್ವಜನಿಕರಿಗಾಗಿ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ಬಾವಿಯನ್ನು ಸರಕಾರಿ ಜಾಗದಲ್ಲಿ ಮಾಡಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅದನ್ನು ಒತ್ತುವರಿ ಮಾಡಿಕೊಂಡ ಬೇಲಿಯನ್ನು ಹಾಕಿ ನೀರನ್ನು ಯಾರು ಕುಡಿಯದಂತೆ ಬಾವಿಯೊಳಗೆ ಮಣ್ಣು ಮತ್ತು ಕಸವನ್ನು ಹಾಕಿ ಉಪಯೋಗಿಸಿದಂತೆ ಮಾಡಿದ್ದಾರೆ.

ಈ ಬಾವಿಯ ಬಗ್ಗೆ ಸ್ಥಳೀಯ ಆಡಳಿತ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇದರ ಬಗ್ಗೆ ಕೂಲಂಕುಷ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅದಲ್ಲದೆ ಈ ಬಾವಿಯನ್ನು ಕಲುಷಿತ ಮಾಡಿದವರಿಂದಲ್ಲೇ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಅನುಕೂಲ ಮಾಡಿಕೊಂಡಬೇಕಾಗಿ ಲಾಯಿಲ ನಿವಾಸಿ ಅನ್ಸರ್ ಬಿ ಎಂಬವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಬೆಳ್ತಂಗಡಿ ತಹಶೀಲ್ದಾರ್, ಲಾಯಿಲ ಅಭಿವೃದ್ಧಿ ಅಧಿಕಾರಿ, ಲಾಯಿಲ ಗ್ರಾಮ ಪಂಚಾಯತ್ ಗೆ ಜ.19 ರಂದು ದೂರು ಅರ್ಜಿ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!